ಸಚಿವರ ಎದುರೆ ಸಿದ್ದರಾಮಯ್ಯ ಸರಕಾರದ ಗುಣಗಾನ; ನಿಂತುಕೊಂಡೆ ಭಾಷಣ ಕೇಳಿದ ಸಚಿವ ಕೋಟ (video)
ಮಂಗಳೂರು; ಜಿಲ್ಲಾ ಉಸ್ತುವಾರಿ ಸಚಿವರ ಎದುರೇ  ಸಿದ್ದರಾಮಯ್ಯ ಸರಕಾರವನ್ನು ಹಾಡಿಹೊಗಳಿದ ಜಿ.ಪಂ ಸದಸ್ಯೆಯ ವಿಡಿಯೋ ವೈರಲ್ ಆಗಿದೆ.

 ಪುತ್ತೂರು ತಾಲೂಕು ನೆಟ್ಟಣಿಗೆ ಮುಡ್ನೂರು ಜಿಲ್ಲಾ ಪಂಚಾಯತ್ ಕ್ಷೇತ್ರದ ಈಶ್ವರಮಂಗಲದಲ್ಲಿ ಇಂದು   ಪ್ರಾಥಮಿಕ‌ ಆರೋಗ್ಯ ಕೇಂದ್ರದ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ  ಈ ಘಟನೆ ನಡೆದಿದೆ.

 ಸ್ಥಳೀಯ ಜಿಲ್ಲಾ ಪಂಚಾಯತ್ ಸದಸ್ಯೆ ಕಾಂಗ್ರೆಸ್ ಪಕ್ಷದ  ಅನಿತಾ ಹೇಮನಾಥ್ ಶೆಟ್ಟಿ ಯವರಿಗೆ ಮಾತನಾಡಲು‌ ಆಯೋಜಕರು ಅವಕಾಶ ಸಿಕ್ಕಿರಲಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಾವು ನಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಗೆ ಭಾಗವಹಿಸಲು ಇದ್ದ ಕಾರಣ ಅವಸರವರವಾಗಿ ಕಾರ್ಯಕ್ರಮ ಮುಗಿಸಲಾಗಿತ್ತು. 

  ಆದರೆ  ಕೊನೆಗೆ ವೇದಿಕೆಗೆ ಬಂದ ಅನಿತಾ ಹೇಮನಾಥ ಶೆಟ್ಟಿ ಭಾಷಣ ಆರಂಭಿಸಿದ್ದ ರಾಮಯ್ಯ ಸರಕಾರ ನೀಡಿದ ಅನುದಾನದಿಂದ ಇದು ಸಾಧ್ಯವಾಗಿದೆ ಎಂದು ಹೇಳಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ , ಜಿಲ್ಲಾ ಆರೋಗ್ಯಾಧಿಕಾರಿ ಡಾ ರಾಮಕೃಷ್ಣ , ತಾಲೂಕು ಆರೋಗ್ಯಾಧಿಕಾರಿ ಡಾ ಅಶೋಕ್ ರೈ ಸೇರಿದಂತೆ ಈ ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ ಎಲ್ಲರನ್ನೂ ಸ್ಮರಿಸಿಕೊಂಡರು.
   
ಅನಿತಾ ಅವರ ಇಷ್ಟು ಹೊತ್ತು ಭಾಷಣದ ವೇಳೆ ಜಿಲ್ಲಾ ಉಸ್ತುವಾರಿ ಸಚಿವರು ನಿಂತುಕೊಂಡೇ ಭಾಷಣ ಕೇಳಿದರು. ಸಂಸದರು ಮತ್ತು‌ ಶಾಸಕರು ಮಾತ್ರ ಅದಕ್ಕಿಂತ ಮೊದಲೇ ಅಲ್ಲಿಂದ ತೆರಳಿದ್ದರು