ಬೆಳ್ತಂಗಡಿಯಲ್ಲಿ ತಂದೆಯನ್ನೇ ತಲವಾರಿನಿಂದ ಕಡಿದು ಕೊಂದ ಮಗನ ಬಂಧನ
Thursday, August 27, 2020
(ಗಲ್ಫ್ ಕನ್ನಡಿಗ)ಬೆಳ್ತಂಗಡಿ: ಬೆಳ್ತಂಗಡಿಯಲ್ಲಿ ವಾಕಿಂಗ್ ಹೋಗುತ್ತಿದ್ದ ತಂದೆಯನ್ನು ತಲವಾರಿನಿಂದ ಕಡಿದು ಹತ್ಯೆ ಮಾಡಿದ ಮಗನನ್ನು ಪೊಲೀಸರು ಬಂಧಿಸಿದ್ದಾರೆ.
(ಗಲ್ಫ್ ಕನ್ನಡಿಗ)ಬೆಳ್ತಂಗಡಿ ಜ್ಯೂನಿಯರ್ ಕಾಲೇಜ್ ಸಮೀಪದ ನಿವಾಸಿ ಕಾರು ಚಾಲಕ ವಾಸು ಸಪಲ್ಯ(66) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅವರ ಮಗನನ್ನು ಬಂಧಿಸಿದ್ದಾರೆ.
(ಗಲ್ಫ್ ಕನ್ನಡಿಗ)ವಾಸು ಅವರ ಮಗ ದಯಾನಂದ್ (32) ಬಂಧಿತ ಆರೋಪಿ. ಈತನನ್ನು ಪೊಲೀಸರು ಬುಧವಾರ ರಾತ್ರಿ ಮಂಗಳೂರಿನ ಸ್ಟೇಟ್ ಬ್ಯಾಂಕ್ ಬಳಿ ಬಂಧಿಸಿದ್ದಾರೆ.
(ಗಲ್ಫ್ ಕನ್ನಡಿಗ)ಆ.24 ರಂದು ವಾಸು ಸಪಲ್ಯ ಅವರು ವಾಕಿಂಗ್ ಹೋಗುತ್ತಿದ್ದಾಗ ತಲೆ ಹಾಗೂ ಕುತ್ತಿಗೆ ಭಾಗಕ್ಕೆ ಮಚ್ಚಿನಿಂದ ಕಡಿದು ಕೊಲೆಮಾಡಲಾಗಿತ್ತು.
ಕೃತ್ಯದ ಬಳಿಕ ಇವರ ಮೂರನೇ ಮಗ ದಯಾನಂದ ನಾಪತ್ತೆಯಾಗಿದ್ದನು.ಈತನ ಮೊಬೈಲ್ ಕೂಡ ಸ್ವಿಚ್ ಅಫ್ ಆಗಿತ್ತು. ಈ ಕಾರಣದಿಂದ ಆತನೇ ಕೊಲೆ ನಡೆಸಿರಬಹುದು ಎಂಬ ಸಂಶಯ ಪೊಲೀಸರಿಗೆ ಮೂಡಿತ್ತು.
(ಗಲ್ಫ್ ಕನ್ನಡಿಗ)ತಂದೆಯನ್ನು ಕೊಂದ ಬಳಿಕ ದಯಾನಂದ ಮಂಗಳೂರಿನಲ್ಲಿ ಟ್ಯಾಕ್ಸಿ ಚಾಲಕನಾಗಿ ಕೆಲಸಕ್ಕೆ ಸೇರಿದ್ದ. ಈ ಬಗ್ಗೆ ಮಾಹಿತಿ ಪಡೆದ ತನಿಖಾಧಿಕಾರಿ ಬೆಳ್ತಂಗಡಿ ವೃತ್ತನಿರೀಕ್ಷಕ ಸಂದೇಶ್ ಪಿ.ಜಿ. ಅವರ ತಂಡ ಮಂಗಳೂರು ಸ್ಟೇಟ್ ಬ್ಯಾಂಕ್ ಬಳಿ ಆತನನ್ನು ಬಂಧಿಸಿದ್ದಾರೆ.
(ಗಲ್ಫ್ ಕನ್ನಡಿಗ)‘ತನ್ನನ್ನು ತಂದೆ ಬೈದ ಕಾರಣಕ್ಕೆ ನಾನೇ ಅವರ ಕೊಲೆ ನಡೆಸಿದೆ’ ಎಂಬುದಾಗಿ ದಯಾನಂದ ತಪ್ಪೊಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
(ಗಲ್ಫ್ ಕನ್ನಡಿಗ)