ಹಿರಿಯ ಸ್ವಾತ್ರಂತ್ರ್ಯ ಹೋರಾಟಗಾರ ಜಾಕೋಬ್ ಲೋಬೋರವರ ಜೀವನ ಹಾಗೂ ಸಾಧನೆಯ "ಅನುಭೂತಿ"ಪುಸ್ತಕ ಬಿಡುಗಡೆ
Wednesday, August 26, 2020
(ಗಲ್ಫ್ ಕನ್ನಡಿಗ)ಮಂಗಳೂರು : ಹಿರಿಯ ಸ್ವಾತ್ರಂತ್ರ್ಯ ಹೋರಾಟಗಾರ ಹಾಗೂ ಸಮಾಜ ಕಲ್ಯಾಣ ಇಲಾಖೆಯಲ್ಲಿ ಉನ್ನತಾಧಿಕಾರಿಯಾಗಿ ಮತ್ತು ಬರಹಗಾರರಾಗಿ ಸೇವೆ ಸಲ್ಲಿಸಿರುವತಂಹ ಶ್ರೀ ಸಿ.ಹೆಚ್ ಜಾಕೋಬ್ ಲೋಬೋರವರ ಜೀವನ ಹಾಗೂ ಸಾಧನೆಯನ್ನು ಹೇಳುವಂತಹ "ಅನುಭೂತಿ" ಪುಸ್ತಕವನ್ನು ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಬಿಡುಗಡೆಗೊಳಿಸಿದರು.
(ಗಲ್ಫ್ ಕನ್ನಡಿಗ) ಲೇಖಕ ಶ್ರೀನಿವಾಸ ಕೌಶಿಕ್ ಅವರು ರಚಿಸಿರುವ, ಬೆಂಗಳೂರಿನ ಅನಂತ ಪ್ರಕಾಶನದ ಶ್ರೀ ಉಮೇಶ್ ನಾಗಮಂಗಲ ಅವರು ಈ ಕೃತಿಯನ್ನು ಪ್ರಕಟಿಸಿದ್ದಾರೆ.
(ಗಲ್ಫ್ ಕನ್ನಡಿಗ)ಪುಸ್ತಕ ಬಿಡುಗಡೆ ಗೊಳಿಸಿ ಮಾತನಾಡಿದ ಕಲ್ಕೂರ ಅವರು
ಸ್ವಾತಂತ್ರ್ಯ ಪೂರ್ವದಲ್ಲೇ ಜನಿಸಿರುವ ಜಾಕೋಬ್ ಲೋಬೋ ಅವರು ತಾನೊಬ್ಬ ಸರ್ಕಾರಿ ಅಧಿಕಾರಿಯಾಗಿದ್ದರೂ ತನ್ನ ಕಾರ್ಯಕ್ಷೇತ್ರವನ್ನು ಮೀರಿ ಬಡವರ ಸೇವೆ ಮಾಡಿದಂತವರು. ಅಂದಿನ ಕಾಲದ ಹಿಂದೂಳಿದ ಬಡಕುಟುಂಬಗಳಿಗೆ ಅವರು ಮಾಡಿರುವ ಸೇವೆ ನೆನಪಿನಾಳದಲ್ಲಿ ಉಳಿಯುವಂತದ್ದು, ಇಂತಹ ಮಹಾನ್ ಸಾಧಕನ ಜೀವನ ಹಾಗೂ ಸಾಧನೆಯನ್ನು ತಿಳಿಸುವಂತಹ ಪುಸ್ತಕವನ್ನು ಬಿಡುಗಡೆ ಮಾಡುತ್ತಿರುವುದಕ್ಕೆ ಹೆಮ್ಮೆಯಾಗುತ್ತದೆ ಎಂದು ಹೇಳಿದರು.
(ಗಲ್ಫ್ ಕನ್ನಡಿಗ)ಕಾರ್ಯಕ್ರಮದಲ್ಲಿ ಹಿರಿಯ ಕಲಾ ನಿರ್ದೇಶಕ ತಮ್ಮ ಲಕ್ಷ್ಮಣ,ಲೇಖಕ ಶ್ರೀನಿವಾಸ ಕೌಶಿಕ್, ಆರ್ ಶ್ರೀನಿವಾಸ್, ಶ್ರೀಮತಿ ಹೆಲನ್ ಲೋಬೋ ಮುಂತಾದವರು ಉಪಸ್ಥಿತರಿದ್ದರು.