ಕೈಗಾ ಅಣುಸ್ಥಾವರಕ್ಕೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಭೇಟಿಕಾರವಾರ : ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಕೆ. ಅವರು ಮಂಗಳವಾರ ಕೈಗಾ ಅಣುಸ್ಥಾವರಕ್ಕೆ ಭೇಟಿ ನೀಡಿ, ಕೋವಿಡ್-19 ಮುಂಜಾಗೃತ ಕ್ರಮ ಹಾಗೂ  ಅಲ್ಲಿ ಕೈಗೊಂಡಿರುವ ಇತರೇ ಸುರಕ್ಷತಾ  ಕ್ರಮಗಳನ್ನು ಪರೀಶೀಲಿಸಿದರು.

ಬಳಿಕ ಸ್ಥಾವರದ ನಿರ್ದೇಶಕ ಕೆ. ಸತ್ಯನಾರಾಯಣ ಅವರೊಂದಿಗೆ ಮಾತನಾಡಿ ಇಲ್ಲಿಯ ಅಧಿಕಾರಿ ಮತ್ತು  ವರ್ಗದವರಿಗೆ ಆರೋಗ್ಯ  ತಪಾಷಣೆ ಮತ್ತು ಚಿಕಿತ್ಸೆ  ಸರಿಯಾಗಿ ಆಗಬೇಕೆಂದು ಸೂಚಿಸಿದರು. ಅಲ್ಲದೇ ಸ್ಥಾವರಕ್ಕೆ ಪೂರೈಸಬೇಕಾದ ಸರಕು ಸಾಗಾಣಿಕೆಗೆ ಮತ್ತು ಸಿಬ್ಬಂದಿ ಓಡಾಟಕ್ಕೆ ಬೇಕಾದ ಅನುಮತಿಯನ್ನು ಜಿಲ್ಲಾಡಳಿತದಿಂದ ಆಯಾ ದಿನದಂದೇ ಅತೀ ಶೀಘ್ರದಲ್ಲಿ ನೀಡಲು ಕ್ರಮ ಕೈಗೊಳ್ಳಲಾಗುವುದೆಂದು ಹೇಳಿದರು 
ಈ ಸಂದರ್ಭದಲ್ಲಿ ಜಿಲ್ಲಾ ಪೊಲಿಸವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಹೆಚ್ಚುವರಿ ಪೊಲೀ ಸ್ ವರಿಷ್ಠಾಧಿಕಾರಿ ಎಸ್. ನಾರಾಯಣ ಹಾಗೂ ಇತರರು ಹಾಜರಿದ್ದರು.