ಮೊಬೈಲ್ ನಲ್ಲಿ ಕೊರೊನಾ ಜಾಗೃತಿ ವಾಯ್ಸ್ ನೀಡಿದ ಸುಳ್ಯದ ಟಿಂಟುಮೋಳ್ ಗೆ ಅರಸಿ ಬಂದ ಪ್ರಶಸ್ತಿ(ಗಲ್ಫ್ ಕನ್ನಡಿಗ)
ಮಂಗಳೂರು;  ಮೊಬೈಲ್ ನಲ್ಲಿ ಕೊರೊನಾ ಜಾಗೃತಿಯ ವಾಯ್ಸ್ ನೀಡಿದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ದ ಟಿಂಟುಮೋಳ್ ಜೋಸೆಫ್ ಗೆ ಕೇರಳದ ಪ್ರಶಸ್ತಿ ಅರಸಿ ಬಂದಿದೆ.

(ಗಲ್ಫ್ ಕನ್ನಡಿಗ)ಕೇರಳದ ಮಲಯಾಳಂ ಪುರಸ್ಕಾರ ಸಮಿತಿಯು ವಿವಿಧ ಕ್ಷೇತ್ರಗಳ ಸಾಧಕರಿಗೆ ನೀಡುವ ಪುರಸ್ಕಾರಕ್ಕೆ ಕಲಾ ಕ್ಷೇತ್ರದಿಂದ  ಟಿಂಟುಮೋಳ್  ಆಯ್ಕೆಯಾಗಿದ್ದಾರೆ.

(ಗಲ್ಫ್ ಕನ್ನಡಿಗ)ಸುಳ್ಯದ ಮರ್ಕಂಜದವರಾದ ಟಿ.ವಿ.ಜೋಸೆಫ್ ಮತ್ತು ಆಲಿಸ್ ಅವರ ಪುತ್ರಿಯಾಗಿರುವ ಟಿಂಟುಮೋಳ್ ಪ್ರಸ್ತುತ ದೆಹಲಿಯಲ್ಲಿದ್ದಾರೆ.  ವಾಯ್ಸ್ ಓವರ್ ಆರ್ಟಿಸ್ಟ್ ಆಗಿ ಪ್ರಸಿದ್ಧರಾಗಿರುವ ಇವರು ಕೇರಳದ ಮೊಬೈಲ್ ಫೋನ್ ಗಳಲ್ಲಿ ಕೇಳಿಸುವ ಕೊರೋನಾ ಜಾಗೃತಿ ಗೆ ಕಂಠದಾನ ಮಾಡಿದ್ದರು.
(ಗಲ್ಫ್ ಕನ್ನಡಿಗ)