ಅಮೇರಿಕದಲ್ಲಿ ಟಿಕ್ ಟಾಕ್ , ವೀಚ್ಯಾಟ್ ನಿಷೇಧಕ್ಕೆ ಟ್ರಂಪ್ ಸಹಿ
(ಗಲ್ಪ್ ಕನ್ನಡಿಗ)ವಾಷಿಂಗ್ಟನ್: ಭಾರತದಲ್ಲಿ ನಿಷೆಧ ಕಂಡ ಚೀನಿ ಆಪ್ ಟಿಕ್ ಟಾಕ್ , ವೀ ಚ್ಯಾಟ್ ಗೆ ಅಮೇರಿಕದಲ್ಲಿಯೂ ನೆಲೆ ಇಲ್ಲದಂತಾಗಿದೆ. ಚೀನಿ ಆಪ್ ನ್ನು ನಿಷೇಧಿಸಿದ ಭಾರತ ಸರಕಾರದ ಕ್ರಮವನ್ನು ಅಮೇರಿಕವು ಮುಂದುವರಿಸಿದೆ.
(ಗಲ್ಪ್ ಕನ್ನಡಿಗ)ಟಿಕ್ ಟಾಕ್ ಮತ್ತು ವೀ ಚ್ಯಾಟ ನ್ನು ನಿಷೇಧಿಸುವ ಆದೇಶಕ್ಕೆ ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಫ್ ಸಹಿ ಹಾಕುವ ಮೂಲಕ ಟಿಕ್ ಟಾಕ್ , ವೀಚ್ಯಾಟ್ ಗೆ ಅಮೇರಿಕದ ಬಾಗಿಲು ಮುಚ್ಚಿದ್ದಾರೆ.
ಗಲ್ಪ್ ಕನ್ನಡಿಗ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
(ಗಲ್ಪ್ ಕನ್ನಡಿಗ)ಟಿಕ್ ಟಾಕ್ ಮತ್ತು ವಿ ಚ್ಯಾಟ್ ಆಪ್ ಗಳು ಅಮೇರಿಕದ ರಾಷ್ಟ್ರೀಯ ಭದ್ರತೆಗೆ ಮತ್ತು ದೇಶದ ಆರ್ಥಿಕತೆಗೆ ಅಪಾಯಕಾರಿಯಾಗಿರುವುದರಿಂದ ಇದನ್ನು ನಿಏದಿಸಲಾಗಿದೆ ಎಂದು ಟ್ರಂಪ್ ತಿಳಿಸಿದ್ದಾರೆ. ಅಮೇರಿಕದ ಅಧ್ಯಕ್ಷರು ನಿಷೇಧದ ಆದೇಶಕ್ಕೆ ಸಹಿ ಹಾಕಿದ ಇಂದಿನಿಂದ 45 ದಿನಗಳಲ್ಲಿ ನಿಷೇಧವು ಜಾರಿಗೆ ಬರಲಿದ ಎಂದು ಅವರು ತಿಳಿಸಿದ್ದಾರೆ.
(ಗಲ್ಪ್ ಕನ್ನಡಿಗ)ಕೊರೊನಾ ವೈರಸ್ ಬಳಿಕ ಅಮೇರಿ ಮತ್ತು ಚೀನಾದ ಸಂಬಂಧ ಹದೆಗೆಟ್ಟಿದ್ದು ಕೊರೊನಾ ವೈರಸ್ ಜಾಗತಿಕವಾಗಿ ಹಬ್ಬಲು ಚೀನ ಕಾರಣ ಎಂದು ಅಮೇರಿಕ ದೂಷಿಸುತ್ತಿದೆ. ಇದರ ನಡುವೆ ಭಾರತ ಮತ್ತು ಚೀನಾದ ನಡುವೆ ಗಡಿ ಸಮರ ನಡೆದ ಬೆನ್ನಿಗೆ ಭಾರತ ಸರಕಾರ ಟಿಕ್ ಟಾಕ್ ಸೇರುದಂತೆ ಹಲವು ಆಪ್ ಗಳನ್ನು ನಿಷೇಧಿಸಿತ್ತು. ಇದನ್ನು ಟ್ರಂಫ್ ಆಡಳಿತ ಮತ್ತು ಅಮೇರಿಕದ ಶಾಸಕರು ಸ್ವಾಗತಿಸಿದ್ದು , ಇದೀಗ ಟ್ರಂಪ್ ಸರಕಾರ ಟಿಕ್ ಟಾಕ್ ಮತ್ತು ವಿಚ್ಯಾಟ್ ಗೆ ಬಾಗಿಲು ಮುಚ್ಚಿದೆ