
ಪಿಎಫ್ ಹಣ ಕೊಡ್ಲಿಲ್ಲಂತ ಮಾಲೀಕನ ಪತ್ನಿಯ ನಂಬರನ್ನು ಡೇಟಿಂಗ್ Appಗೆ ಹಾಕಿದ ಭೂಪ!
(ಗಲ್ಪ್ ಕನ್ನಡಿಗ)ಬೆಂಗಳೂರು: ಪಿಎಫ್ ಹಣ ಕೊಡಲಿಲ್ಲವೆಂದರೆ ಕಾನೂನು ಮೊರೆ ಹೋಗುವುದು ಸಾಮಾನ್ಯ. ಬೆಂಗಳೂರಿನಲ್ಲೊಬ್ಬ ಪಿಎಫ್ ಹಣ ಸಿಗಲು ವಿಳಂಭವಾಗುತ್ತಿರುವದರಿಂದ ಆಕ್ರೋಶಗೊಂಡು ಮಾಲೀಕ ಮತ್ತು ಮಾಲೀಕ ಪತ್ನಿಯ ನಂಬರ್ ನ್ನು ಡೇಟಿಂಗ್ ಆಪ್ ಗೆ ಹಾಕಿ ವಿಕೃತಿ ಮೆರೆದಿದ್ದಾನೆ.
ಬೆಂಗಳೂರಿನ ಕಲ್ಮನೆ ಟ್ರೇಡಿಂಗ್ ಕಂಪೆನಿಯಲ್ಲಿ ಉದ್ಯೋಗ ಮಾಡುತ್ತಿದ್ದ ಹರಿಪ್ರಸಾದ್ ಜೋಷಿ ಎಂಬಾತ ಈ ಕೃತ್ಯ ಮಾಡಿದವನು. ಈತ ಕೆಲಸವನ್ನು ಕೆಲ ತಿಂಗಳ ಹಿಂದೆ ಬಿಟ್ಟಿದ್ದನ್ನು. ಆ ಬಳಿಕ ಪಿ ಎಫ್ ಗೆ ಅರ್ಜಿ ಸಲ್ಲಿಸಿದ್ದ. ಕೊರೊನಾ ಕಾರಣದಿಂದ ಆಡಳಿತಾತ್ಮಕ ಕೆಲಸ ಸ್ಥಗಿತಗೊಂಡ ಕಾರಣ ಈತನ ಪಿ ಎಫ್ ಅರ್ಜಿಯ ಪ್ರಕ್ರೀಯೆ ನಡೆದಿರಲಿಲ್ಲ.
ಗಲ್ಪ್ ಕನ್ನಡಿಗ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
(ಗಲ್ಪ್ ಕನ್ನಡಿಗ)ಈತನಿಗೆ ಕಂಪೆನಿಯ ಮಾಲೀಕರು ಕೊರೊನಾದ ಬಳಿಕ ಪಿಎಫ್ ಸಮಸ್ಯೆ ಬಗೆಹರಿಸುವುದಾಗಿ ಭರವಸೆಯನ್ನು ನೀಡಿದ್ದರು. ಆದರೂ ಈತ ಮಾಲೀಕ, ಮಾಲೀಕನ ಪತ್ನಿ ಮತ್ತು ಮಕ್ಕಳನ್ನು ನಿಂದಿಸಿ ಇಮೇಲ್ ಮಾಡಿದ್ದ. ಇಷ್ಟು ಮಾತ್ರವಲ್ಲದೆ ಈತ ಮಾಲೀಕ ಮತ್ತು ಮಾಲೀಕನ ಪತ್ನಿಯ ಮೊಬೈಲ್ ನಂಬರನ್ನು ಡೇಟಿಂಗ್ ಆಪ್ ಗೆ ಅಪ್ಲೋಡ್ ಮಾಡಿದ್ದಾನೆ. ಲೊಕ್ಯಾಂಟೋ ಮತ್ತಿತ್ತರ ಡೇಟಿಂಗ್ ಆಪ್ ಗೆ ನಂಬರನ್ನು ಅಪ್ಲೋಡ್ ಮಾಡಿದ್ದ ಈತ ಪೋರ್ನೋಗ್ರಾಫಿಕ್ ವಸ್ತುಗಳನ್ನು ಮಾಲೀಕನ ಹೆಸರಿನ್ನಲ್ಲಿ ಆರ್ಡ್ ರ್ ಮಾಡಿದ್ದ. ಈ ಮೂಲಕ ಮಾಲೀಕನ ಗೌರವಕ್ಕೆ ಮಸಿ ಬಳಿಯನ್ನು ಪ್ರಯತ್ನಿಸಿದ್ದಾನೆ.
(ಗಲ್ಪ್ ಕನ್ನಡಿಗ)ಈ ಹಿನ್ನೆಲೆಯಲ್ಲಿ ಕಂಪೆನಿ ಮಾಲೀಕರು ಆರೋಪಿ ವಿರುದ್ದ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.
(ಗಲ್ಪ್ ಕನ್ನಡಿಗ)