ಮಂಗಳೂರು ಗೋಲಿಬಾರ್ - ಸಾಕ್ಷ್ಯ ಅಥವಾ ಹೇಳಿಕೆಯನ್ನು ನೀಡಲು ಅಂತಿಮ ಅವಕಾಶ(ಗಲ್ಫ್ ಕನ್ನಡಿಗ)ಮಂಗಳೂರು  :-ಮಂಗಳೂರಿನಲ್ಲಿ  2019 ಡಿಸೆಂಬರ್ 19 ರಂದು ನಡೆದ ಗೋಲಿಬಾರ್ ಗೆ ಸಂಬಂಧಿಸಿದಂತೆ ಸಾಕ್ಷ್ಯ ಅಥವಾ ಹೇಳಿಕೆ ನೀಡಲು ಅಂತಿಮ ಅವಕಾಶವನ್ನು ತನಿಖಾ ತಂಡ ನೀಡಿದೆ.

 (ಗಲ್ಫ್ ಕನ್ನಡಿಗ)ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ನಡೆದ ಪ್ರತಿಭಟನೆಯ ಸಮಯದಲ್ಲಿ ಗುಂಡೇಟಿನಿಂದ ನೌಶಿನ್ ಹಾಗೂ  ಜಲೀಲ್ ಕುದ್ರೋಳಿ ಎಂಬವರು ಮೃತಪಟ್ಟಿದ್ದರು.  ಈ ಬಗ್ಗೆ ಮ್ಯಾಜಿಸ್ಟೀರಿಯಲ್ ವಿಚಾರಣೆ ನಡೆಸಲು ಜಿಲ್ಲಾ ದಂಡಾಧಿಕಾರಿ ಹಾಗೂ ಜಿಲ್ಲಾಧಿಕಾರಿ, ಉಡುಪಿ ಜಿಲ್ಲೆ, ಉಡುಪಿ ಇವರನ್ನು ಸರಕಾರದ ಆದೇಶ ಸಂಖ್ಯೆ ಹೆಚ್‍ಡಿ 5 ಪಿಸಿಇ 2019, ಬೆಂಗಳೂರು ದಿನಾಂಕ 23/12/2019 ಇದರಂತೆ ನೇಮಕ ಮಾಡಿ ಆದೇಶ ಹೊರಡಿಸಲಾಗಿತ್ತು.


(ಗಲ್ಫ್ ಕನ್ನಡಿಗ)ಈ ಸಂಬಂಧ   ಈ ಘಟನೆ ಬಗ್ಗೆ ಮಾಹಿತಿಯುಳ್ಳ ಅಥವಾ ಈ ಘಟನೆಯನ್ನು ಪ್ರತ್ಯಕ್ಷವಾಗಿ ನೋಡಿದ ಯಾವುದೇ ವ್ಯಕ್ತಿಗಳು ದಿನಾಂಕ  11.08.2020 ರಂದು ಪೂರ್ವಾಹ್ನ 11 ಗಂಟೆಯಿಂದ ಅಪರಾಹ್ನ 1 ಗಂಟೆವರೆಗೆ ಸಹಾಯಕ ಆಯುಕ್ತರ ಕೋರ್ಟ್ ಹಾಲ್, ಮಿನಿ ವಿಧಾನಸೌಧ, ಮಂಗಳೂರು, ಇಲ್ಲಿ ತನ್ನ ಸಮಕ್ಷಮ ಹಾಜರಾಗಿ ಸಾಕ್ಷ್ಯ ಅಥವಾ ಹೇಳಿಕೆಯನ್ನು ನೀಡಲು ಅಂತಿಮ ಅವಕಾಶವನ್ನು ನೀಡಲಾಗಿದೆ.  ತದನಂತರ ಸಾರ್ವಜನಿಕರಿಂದ ಯಾವುದೇ ಸಾಕ್ಷ್ಯ ಅಥವಾ ಹೇಳಿಕೆಯನ್ನು ಸ್ವೀಕರಿಸಲಾಗುವುದಿಲ್ಲ ಎಂದು ಉಡುಪಿ ಜಿಲ್ಲಾ ಡಂಡಾಧಿಕಾರಿ ಹಾಗೂ   ಜಿಲ್ಲಾಧಿಕಾರಿ ಜಿ. ಜಗದೀಶ ಅವರ ಪ್ರಕಟಣೆ ತಿಳಿಸಿದೆ.