-->

 ಬೈಕ್ ಕಳವು ಪ್ರಕರಣ: 5 ಲಕ್ಷ ಮೌಲ್ಯದ 7 ಬೈಕ್ ವಶ, ಐವರು ಆರೋಪಿಗಳ ಹಿಸ್ಟರಿ ಭಯಾನಕ

ಬೈಕ್ ಕಳವು ಪ್ರಕರಣ: 5 ಲಕ್ಷ ಮೌಲ್ಯದ 7 ಬೈಕ್ ವಶ, ಐವರು ಆರೋಪಿಗಳ ಹಿಸ್ಟರಿ ಭಯಾನಕ(ಗಲ್ಪ್ ಕನ್ನಡಿಗ)ಮಂಗಳೂರು : ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಿಂಚಿನ ಕಾರ್ಯಾಚರಣೆ ನಡೆಸಿದ ಬಜ್ಪೆ ಪೊಲೀಸರು 5 ಮಂದಿ ಆರೋಪಿಗಳನ್ನು ಬಂಧಿಸಿ, ಏಳು ಬೈಕ್‌ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.


(ಗಲ್ಪ್ ಕನ್ನಡಿಗ)ಸುರತ್ಕಲ್ 3ನೇ ಬ್ಲಾಕ್‌ನ ಜನತಾ ಕಾಲನಿಯ ವಿಜಯ ಬೋವಿ (23), ಬಂಟ್ವಾಳದ ಹೂಹಾಕುವಕಲ್ಲು ನಿವಾಸಿ ಸುದೀಶ್ ನಾಯರ್ (20) ಕಾಟಿಪಳ್ಳ ಕೃಷ್ಣಾಪುರ 5ನೇ ಬ್ಲಾಕ್‌ನ ರಕ್ಷಿತ್ ಕುಲಾಲ್ (22), ಉಳಾಯಿಬೆಟ್ಟು ನಿವಾಸಿ ಪ್ರದೀಪ್ ಪೂಜಾರಿ (27), ಮುಲ್ಕಿ ಅಶ್ವತ್ಥಕಟ್ಟೆಯ ಅಭಿಜಿತ್ ಬಂಗೇರಾ (26), ಬಂಧಿತ ಆರೋಪಿಗಳು.

 

 

(ಗಲ್ಪ್ ಕನ್ನಡಿಗ)ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಕಳವು ಪ್ರಕರಣ ಹೆಚ್ಚಳದಿಂದಾಗಿ ವಿಶೇಷ ಕಾರ್ಯಾಚರಣೆ ಕೈಗೊಳ್ಳಲು ಆಯುಕ್ತರು ನೀಡಿದ ನಿರ್ದೇಶನದಂತೆ ಆ.6ರಂದು ಸಂಜೆ ಬಜ್ಪೆ ವ್ಯಾಪ್ತಿಯಲ್ಲಿ ಬಜ್ಪೆ ಠಾಣಾಧಿಕಾರಿ ಮತ್ತು ಸಿಬ್ಬಂದಿ ವಾಹನ ತಪಾಸಣೆ ಕಾರ್ಯ ಕೈಗೊಂಡಾಗ ಬೈಕ್ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಎರಡು ಬೈಕ್‌ಗಳಲ್ಲಿ ಬರುತ್ತಿದ್ದ ನಾಲ್ವರನ್ನು ತಡೆದು ನಿಲ್ಲಿಸಿ, ವಿಚಾರಿಸಿದಾಗ ಬೈಕ್ ಕಳವು ವಿಷಯ ತಿಳಿದುಬಂದಿದೆ .

ಗಲ್ಪ್ ಕನ್ನಡಿಗ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ 


(ಗಲ್ಪ್ ಕನ್ನಡಿಗ)ಬಜ್ಪೆ ಠಾಣಾ ವ್ಯಾಪ್ತಿಯ ಬ್ಯಾಂಕ್‌ವೊಂದರ ಬಳಿಯಿಂದ ಬಜಾಜ್ ಡಿಸ್ಕವರಿ ಬೈಕ್, ಎಡಪದವಿನಿಂದ ಪಲ್ಸರ್ 150, ಯಮಹ ಎಫ್‌ಝೆಡ್,ಈಶ್ವರಕಟ್ಟೆಯಿಂದ ಪಲ್ಸರ್ ಎನ್.ಎಸ್. 160, ಕಾವೂರು ಠಾಣಾ ವ್ಯಾಪ್ತಿಯ ಪಂಜಿಮೊಗರಿನಿಂದ ಪಲ್ಸರ್ 150, ಪಣಂಬೂರು ಠಾಣಾ ವ್ಯಾಪ್ತಿಯ ಜೋಕಟ್ಟೆಯಿಂದ ಆಕ್ಟೀವಾ ಸ್ಕೂಟರ್‌ನ್ನು ಕಳವು ಮಾಡಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


(ಗಲ್ಪ್ ಕನ್ನಡಿಗ)ಮೂಡಿಬಿದಿರೆ ಪೇಟೆಯ ದೇವಸ್ಥಾನವೊಂದರ ಎದುರಿನ ಚಿನ್ನದಂಗಡಿಯೊಂದರ ದರೋಡೆ ಮಾಡಲು ಸಂಚು ರೂಪಿಸಿರುವ ವಿಷಯ ವಿಚಾರಣೆ ವೇಳೆ ಬಹಿರಂಗವಾಗಿದೆ. ಬಂಧಿತ ಆರೋಪಿಗಳಿಂದ ಐದು ಲಕ್ಷ ರೂ. ವೌಲ್ಯದ 7 ದ್ವಿಚಕ್ರ ವಾಹನಗಳನ್ನು ಸ್ವಾಧೀನಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


(ಗಲ್ಪ್ ಕನ್ನಡಿಗ)ಮೊದಲ ಆರೋಪಿ ವಿಜಯ ಬೋವಿ ವಿರುದ್ಧ ಬಜ್ಪೆ ಹಾಗೂ ಬೆಳ್ತಂಗಡಿ ಠಾಣೆಯಲ್ಲಿ ತಲಾ ಮೂರು ಬೈಕ್ ಕಳವು ಪ್ರಕರಣ, ಮೂಡುಬಿದಿರೆ, ಪಣಂಬೂರು ಕಾವೂರು ಠಾಣೆಯಲ್ಲಿ ತಲಾ ಒಂದು ಬೈಕ್ ಕಳವು ಪ್ರಕರಣ ಹಾಗೂ ಕಾವೂರು ಠಾಣೆಯಲ್ಲಿ ಗಾಂಜಾ ಪ್ರಕರಣಗಳು ದಾಖಲಾಗಿವೆ.ಎರಡನೇ ಆರೋಪಿ ಪ್ರದೀಪ್ ಪೂಜಾರಿ ವಿರುದ್ಧ ಬಜ್ಪೆ ಠಾಣಾ ವ್ಯಾಪ್ತಿ ಭೂಗತ ಪಾತಕಿ ಮಾಡೂರು ಯೂಸುಫ್ ಕೊಲೆ ಪ್ರಕರಣ, ಮುಲ್ಕಿ ಠಾಣಾ ವ್ಯಾಪ್ತಿ ದರೋಡೆಗೆ ಸಂಚು, ಮಂಗಳೂರು ಉತ್ತರ (ಬಂದರ್) ಠಾಣಾ ವ್ಯಾಪ್ತಿ ಟೆಕ್ಕಿ ಮೋಹನ್ ಕೊಲೆ ಪ್ರಕರಣ, ಬೆಳ್ತಂಗಡಿ ಠಾಣಾ ವ್ಯಾಪ್ತಿ ಮೂರು ಬೈಕ್ ಕಳವು, ಮೂಡುಬಿದಿರೆ ಠಾಣಾ ವ್ಯಾಪ್ತಿ ಬೈಕ್ ಕಳವು ಪ್ರಕರಣಗಳು ದಾಖಲಾಗಿವೆ.


(ಗಲ್ಪ್ ಕನ್ನಡಿಗ)ಮೂರನೇ ಆರೋಪಿ ಅಭಿಜಿತ್ ಬಂಗೇರಾ ವಿರುದ್ಧ ಕಾಪೂ ಠಾಣಾ ವ್ಯಾಪ್ತಿ ಹಲ್ಲೆ, ಗಲಾಟೆ ಸಂಬಂಧಿಸಿದ ಮೂರು ಪ್ರಕರಣ, ಮೈಸೂರು ನರಸಿಂಹರಾಜ ಠಾಣಾ ವ್ಯಾಪ್ತಿ ಕೊಲೆಯತ್ನ, ಬಜ್ಪೆ ವ್ಯಾಪ್ತಿ ಎರಡು ಬೈಕ್ ಕಳವು ಪ್ರಕರಣಗಳು ದಾಖಲಾಗಿವೆ. ನಾಲ್ಕನೇ ಆರೋಪಿ ರಕ್ಷಿತ್ ಕುಲಾಲ್ ವಿರುದ್ಧ ಸುರತ್ಕಲ್ ಠಾಣಾ ವ್ಯಾಪ್ತಿ ಸುಲಿಗೆ, ಬಜ್ಪೆ ಹಾಗೂ ಕಾವೂರು ಠಾಣಾ ವ್ಯಾಪ್ತಿ ತಲಾ ಒಂದು ಬೈಕ್ ಕಳವು ಪ್ರಕರಣಗಳು ದಾಖಲಾಗಿವೆ. ಐದನೇ ಆರೋಪಿ ಸುದೀಶ್ ನಾಯರ್ ವಿರುದ್ಧ ಬೆಳ್ತಂಗಡಿ ಠಾಣಾ ವ್ಯಾಪ್ತಿ ಮೂರು ಬೈಕ್ ಕಳವು, ಉಳ್ಳಾಲ ಠಾಣಾ ವ್ಯಾಪ್ತಿ ಗಲಾಟೆ ಸಂಬಂಧಿಸಿದ ಪ್ರಕರಣ, ಬಜ್ಪೆ ಹಾಗೂ ಪಣಂಬೂರು ಠಾಣಾ ವ್ಯಾಪ್ತಿ ತಲಾ ಒಂದು ಬೈಕ್ ಕಳವು ಪ್ರಕರಣಗಳು ದಾಖಲಾಗಿವೆ.
Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99