
ದ.ಕ. ಜಿಲ್ಲೆಯಲ್ಲಿ ಇಂದು 7 ಮಂದಿ ಬಲಿ; ಮೃತರ ಸಂಖ್ಯೆ 208 ಕ್ಕೆ ಏರಿಕೆ
Friday, August 7, 2020
(ಗಲ್ಪ್ ಕನ್ನಡಿಗ)ಮಂಗಳೂರು: ದ.ಕ. ಜಿಲ್ಲೆಯಲ್ಲಿ ಕೊರೊನಾದಿಂದಾಗಿ ಇಂದು (ಶುಕ್ರವಾರ) 7 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ದ.ಕ ಜಿಲ್ಲೆಯಲ್ಲಿ ಮೃತರ ಸಂಖ್ಯೆ 208 ಕ್ಕೆಏರಿಕೆಯಾಗಿದೆ.
ಗಲ್ಪ್ ಕನ್ನಡಿಗ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
(ಗಲ್ಪ್ ಕನ್ನಡಿಗ) ದ.ಕ ಜಿಲ್ಲೆಯಲ್ಲಿ ಮೃತಪಟ್ಟ ಏಳು ಮಂದಿಯಲ್ಲಿ ಮಂಗಳೂರು ತಾಲೂಕಿನಲ್ಲಿ 5 ಮಂದಿ ಮೃತಪಟ್ಟಿದ್ದಾರೆ. ಅಲ್ಲದೆ, ಬೆಳ್ತಂಗಡಿ ತಾಲೂಕು ಹಾಗೂ ಪುತ್ತೂರು ತಾಲೂಕಿನ ತಲಾ ಒಬ್ಬರು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 7 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು 208 ಮಂದಿ ಕೋವಿಡ್ ಸೋಂಕಿನಿಂದ ಮೃತಪಟ್ಟಂತಾಗಿದೆ.
(ಗಲ್ಪ್ ಕನ್ನಡಿಗ)ಮೃತರೆಲ್ಲರೂ ವಿವಿಧ ಕಾಯಿಲೆಗಳಿಗಾಗಿ ನಗರದ ವಿವಿಧ ಖಾಸಗಿ ಹಾಗೂ ಕೋವಿಡ್ ಆಸ್ಪತ್ರೆ ವೆನ್ಲಾಕ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ದಕ್ಷಿಣ ಕನ್ನಡ ಜಿಲ್ಲಾಡಳಿತ ಮಾಹಿತಿ ನೀಡಿದೆ.