ತಹಶೀಲ್ದಾರನ ಕಾಮಪುರಾಣ: ಸಹೋದ್ಯೋಗಿ ಜೊತೆ ಲವ್ವಿಡವ್ವಿ, ವೀಡಿಯೋ ವೈರಲ್ ಆದ ಬಳಿಕ ಯುವತಿಯಿಂದ ದೂರು
Friday, August 28, 2020
(ಗಲ್ಫ್ ಕನ್ನಡಿಗ)ಕೊಪ್ಪಳ: ಕಚೇರಿಯಲ್ಲಿಲ್ಲೇ ತಹಶೀಲ್ದಾರ್ ತಮ್ಮ ಅಧೀನ ಮಹಿಳಾ ಸಿಬ್ಬಂದಿ ಜೊತೆ ಕಾಮ ಪುರಾಣದಲ್ಲಿ ತೊಡಗಿದ್ದ. ಈ ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ತಾಣದಲ್ಲಿ ಭಾರೀ ಸುದ್ದಿ ಮಾಡಿತ್ತು. ಅದರ ಬೆನ್ನಲ್ಲೇ ಮಹಿಳಾ ಉದ್ಯೋಗಿ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ವಿಡೀಯೊ ವೈರಲ್ ಪ್ರಕರಣ ಮತ್ತೊಂದು ಟ್ವಿಸ್ಟ್ ಪಡೆದುಕೊಂಡಿದೆ. “ತಾನು ಕೆಲಸದಲ್ಲಿ ತೊಡಗಿಕೊಂದಿದ್ದಾಗ ಹಿಂದಿನಿಂದ ಬಂದು ತಬ್ಬಿ ಚುಂಬಿಸಿದ್ದು” ಎಂದು ಗ್ರಾಮ ಲೆಕ್ಕಿಗ ಮಹಿಳಾ ಸಿಬ್ಬಂದಿಯಿಂದ ಎರಡು ತಿಂಗಳ ಬಳಿಕ ಠಾಣೆಗೆ ದೂರು ನೀಡಿದ್ದಾರೆ.
(ಗಲ್ಫ್ ಕನ್ನಡಿಗ)ಪ್ರಕರಣದ ಪ್ರಥಮ ವರ್ತಮಾನ ವರದಿಯನ್ನು ಪೊಲೀಸರು ದಾಖಲಿಸಿಕೊಂಡಿದ್ದು, ಕಾಮಪುರಾಣದಲ್ಲಿ ತೊಡಗಿದ್ದ ತಹಶೀಲ್ದಾರ್ ಹೊಸ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ.
(ಗಲ್ಫ್ ಕನ್ನಡಿಗ)ಕೊಪ್ಪಳ ಜಿಲ್ಲೆಯ ಕುಷ್ಠಗಿ ತಾಲೂಕಿನಲ್ಲಿ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆ.ಎಂ. ಗುರುಬಸವರಾಜ ಎಂಬವರು ತನ್ನ ಕಚೇರಿಯಲ್ಲಿ ತನ್ನ ಸಹದ್ಯೋಗಿ ಜೊತೆ ನಡೆಸಿದ ಸರಸ ಸಲ್ಲಾಪ ಘಟನೆ, ಅದು ನಡೆದ ಎರಡು ತಿಂಗಳ ಬಳಿಕ ವೈರಲ್ ಆಗಿದ್ದು ಇದೀಗ ಈ ಪ್ರಕರಣ ಮತ್ತಷ್ಟೂ ಟ್ವಿಸ್ಟ್ ಪಡೆದುಕೊಂಡಿದೆ. ಸಲ್ಲಾಪ ಪ್ರಕರಣದಲ್ಲಿ ಕಾಣಿಸಿಕೊಂಡಿದ್ದ ಮಹಿಳಾ ವಿ ಎ ಈ ಬಗ್ಗೆ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
(ಗಲ್ಫ್ ಕನ್ನಡಿಗ)ಪ್ರಕರಣವೂ ಎರಡು ತಿಂಗಳ ಹಿಂದೆ ನಡೆದಿತ್ತು. ಆಗ ಕೆ.ಎಂ. ಗುರುಬಸವರಾಜ ಕುಷ್ಠಗಿ ತಾಲೂಕಿನ ತಹಶೀಲ್ದಾರ್ ಆಗಿ ಕಾರ್ಯ ನಿರ್ವಹಿಸುತಿದ್ದರು. ಸದ್ಯ ಅವರು ಅಲ್ಲಿಂದ ವರ್ಗಾವಣೆಗೊಂಡಿದ್ದು ಕೊಪ್ಪಳ ನಗರಾಭಿವೃದ್ಧಿ ಕೋಶದಲ್ಲಿ ತಹಶೀಲ್ದಾರ್ ಆಗಿದ್ದಾರೆ.
(ಗಲ್ಫ್ ಕನ್ನಡಿಗ)ಎರಡು ದಿನಗಳ ಹಿಂದೆ ತನ್ನ ಸಹದ್ಯೋಗಿಗೆ ಚುಂಬಿಸುತ್ತಿರುವ ಆ ಸಿಸಿಟಿವಿ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು . ಸಾರ್ವಜನಿಕರ ವ್ಯಾಪಕ ಅಕ್ರೋಶಕ್ಕೂ ಕಾರಣವಾಗಿತ್ತು. ಆ ಮಹಿಳಾ ಸಹದ್ಯೋಗಿ ಕುಷ್ಟಗಿ ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಿಎ ಆಗಿದ್ದೂ, ತನ್ನಗಂಡ ಹಾಗೂ ಮಾವನ ಜೊತೆ ಸೇರಿ ಕಾಮಿ ಅಧಿಕಾರಿ ಗುರುಬಸವರಾಜ ವಿರುದ್ದ ಆ 27ರಂದು ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿದ್ದಾರೆ ಐಪಿಸಿ ಸಕ್ಸೆನ್ 354 & 354 B, 506 ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ಗಲ್ಫ್ ಕನ್ನಡಿಗ)ಎರಡು ದಿನಗಳ ಹಿಂದೆ ಸಾಮಾಜಿಕ ಜಜಾಲತಾಣ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರಗೊಂಡ ತಹಶೀಲ್ದಾರ್ ಒಬ್ಬರ ಸರಸ ಸಲ್ಲಾಪದ ಸಿಸಿ ಟಿವಿ ವಿಡಿಯೋ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದ್ದು ವಿಡಿಯೋದಲ್ಲಿ ಕಾಣಿಸಿಕೊಂಡ ಮಹಿಳೆಯೂ ಆ ತಹಶೀಲ್ದಾರ್ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.
(ಗಲ್ಫ್ ಕನ್ನಡಿಗ)