
ಸುಳ್ಯ ಶಾಸಕ ಅಂಗಾರ ಗೆ ಕೊರೊನಾ ಪಾಸಿಟಿವ್
(ಗಲ್ಫ್ ಕನ್ನಡಿಗ)ಮಂಗಳೂರು; ಸುಳ್ಯದ ಶಾಸಕ ಅಂಗಾರ ಅವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
(ಗಲ್ಫ್ ಕನ್ನಡಿಗ)ಬಿಜೆಪಿಯ ಹಿರಿಯ ಮುಖಂಡರು ಆಗಿರುವ ಅಂಗಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿಯ ಹಿರಿಯ ಶಾಸಕರು. ಇತ್ತೀಚೆಗೆ ಶಾಸಕರು ಬೆಂಗಳೂರಿಗೆ ತೆರಳಿದ್ದು ಅಸೌಖ್ಯದ ಹಿನ್ನೆಲೆಯಲ್ಲಿ ಸುಳ್ಯದಲ್ಲಿ ತಪಾಸಣೆ ನಡೆಸಿದ್ದರು. ತಪಾಸಣೆ ವೇಳೆ ಅಂಗಾರ ಅವರಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಇವರ ಜೊತೆಗೆ ಕಾರುಚಾಲಕನ ತಪಾಸಣೆ ನಡೆಸಲಾಗಿದ್ದು ಅವರಿಗೆ ಕೂಡ ಕೊರೊನಾ ದೃಢಪಟ್ಟಿದೆ ಎಂದು ತಿಳಿದುಬಂದಿದೆ.
(ಗಲ್ಫ್ ಕನ್ನಡಿಗ)