-->
ads hereindex.jpg
ಮಗನಿಗೆ ಗಲ್ಲುಶಿಕ್ಷೆಯಾಗಲಿ: ತಂದೆಯನ್ನು ಕೊಂದ ಪಾಪಿ ಮಗನ ವಿರುದ್ದ ತಾಯಿಯ ಶಾಪ!

ಮಗನಿಗೆ ಗಲ್ಲುಶಿಕ್ಷೆಯಾಗಲಿ: ತಂದೆಯನ್ನು ಕೊಂದ ಪಾಪಿ ಮಗನ ವಿರುದ್ದ ತಾಯಿಯ ಶಾಪ!(ಗಲ್ಫ್ ಕನ್ನಡಿಗ)ಮಂಗಳೂರು; ಬೆಳ್ತಂಗಡಿ ಯಲ್ಲಿ  ವಾಕಿಂಗ್ ಹೋಗುತ್ತಿದ್ದ ತಂದೆಯನ್ನು ತಲವಾರಿನಿಂದ ಹತ್ಯೆ ಮಾಡಿದ ಮಗನಿಗೆ ಗಲ್ಲು ಶಿಕ್ಷೆಯಾಗಲಿ ಎಂದು ಶಾಪ ನೀಡಿದ್ದಾರೆ.(ಗಲ್ಫ್ ಕನ್ನಡಿಗ)ವಾಸು ಸಫಲ್ಯ ಅವರನ್ನು ಕೊಲೆ ಮಾಡಿದ ದಯಾನಂದ ನನ್ನು ಪೊಲೀಸರು ಘಟನಾ ಸ್ಥಳಕ್ಕೆ ಕರೆದುಕೊಂಡು ಬಂದ ವೇಳೆ ಅತನ ತಾಯಿ ಈ ರೀತಿ ಶಾಪ ನೀಡಿದ್ದಾರೆ.
(ಗಲ್ಫ್ ಕನ್ನಡಿಗ)ಆರೋಪಿಯನ್ನು ಸ್ಥಳ ಮಹಜರುವಿಗೆ ಕರೆದುಕೊಂಡು ಬಂದಾಗ ಸಾರ್ವಜನಿಕರು, ಆರೋಪಿ ತಾಯಿ ಗಾಯತ್ರಿ, ಸಹೋದರರಾದ ಸುದರ್ಶನ್, ನಾಗರಾಜ್ ಬಂದಿದ್ದರು. ಆರೋಪಿ ಮಗನನ್ನು ಕಂಡ ತಾಯಿ ದುಃಖದಿಂದ ನಿನಗೆ ಗಲ್ಲು ಶಿಕ್ಷೆಯಾಗಲಿ ಎಂದು ಶಪಿಸಿದ್ದಾರೆ.(ಗಲ್ಫ್ ಕನ್ನಡಿಗ)ಹತ್ಯೆ ವೇಳೆ ಬಳಸಿದ್ದ ರಕ್ತಸಿಕ್ತ ವಸ್ತ್ರ  ವನ್ನು ಪೊಲೀಸರು ಮಹಜರು ವೇಳೆ ವಶಕ್ಕೆ ಪಡೆದುಕೊಂಡಿದ್ದಾರೆ. ಈತ ತಂದೆಯ ಕೊಲೆಗೆ ಎರಡು ತಿಂಗಳ ಮೊದಲೇ ಸ್ಕೆಚ್ ಹಾಕಿದ್ದನಂತೆ.(ಗಲ್ಫ್ ಕನ್ನಡಿಗ)ಆರೋಪಿಯ ಸಹೋದರ ಕೂಡ ಆಕ್ರೋಶ ವ್ಯಕ್ತಪಡಿಸಿದ್ದು ತಂದೆಯನ್ನು ಕೊಂದವನಿಗೆ ಗಲ್ಲು ಶಿಕ್ಷೆಯಾಗಬೇಕು.25 ವರ್ಷಗಳ ಕಾಲ ಬೆಳ್ತಂಗಡಿಯಿಂದ ಮಂಗಳೂರಿಗೆ ಕಾರು ಓಡಿಸಿ ನಮ್ಮನ್ನು ಸಾಕಿದ್ದಾರೆ. ಕೊರೊನಾ ಸಂಧರ್ಭದಲ್ಲಿಯೂ 5 ತಿಂಗಳಿನಿಂದ ಊಟ ನೀಡಿ ಸಲಹಿದ ಅವರನ್ನು ಸಹೋದರ ಕೊಲೆ ಮಾಡಿರುವುದು ಹೇಯಕೃತ್ಯ. ಅವನನ್ನು ಮನೆಗೆ ಸೇರಿಸುವುದಿಲ್ಲ ಎಂದು ಹೇಳಿದ್ದಾರೆ.

(ಗಲ್ಫ್ ಕನ್ನಡಿಗ)

Ads on article

Advertise in articles 1

advertising articles 2