ಅಚ್ಚರಿ: Subscribe ಮಾಡಿ ಎಂದು ಹೇಳಲು ಪರದಾಡಿದ ಮಂಗಳೂರಿನ ಬಾಲಕನ ವಿಡಿಯೋ 35 ಲಕ್ಷ ವೀಕ್ಷಣೆ


(ಗಲ್ಫ್ ಕನ್ನಡಿಗ)ಮಂಗಳೂರು; ಯೂಟ್ಯೂಬ್ ಚಾನೆಲ್ ಆರಂಭಿಸಿದಾಗ ಅದಕ್ಕೆ  subscribe ಮಾಡುವುದೆ ದೊಡ್ಡ ತಲೆನೋವು. ಇದಕ್ಕಾಗಿ ಯೂಟ್ಯೂಬ್ ಚಾನೆಲ್ subscribe ಮಾಡಿ ಅಂತ ವಿನಂತಿಸುವುದುಂಟು. ಇದೇ ರೀತಿ ಮಂಗಳೂರಿನ ಬಾಲಕನೊಬ್ಬ ಚಾನೆಲ್ subscribe ಮಾಡಿ ಅಂತ ಹೇಳಲು ಪರದಾಡಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದೆ.

 
(ಗಲ್ಫ್ ಕನ್ನಡಿಗ)ಮಂಗಳೂರಿನ ತೊಕ್ಕೊಟ್ಟುವಿನ ಅಬ್ದುರ್ರಹ್ಮಾನ್ ಎಂಬ ಬಾಲಕ ಇದೀಗ ಏಕಾಏಕಿ ಖ್ಯಾತಿ ಪಡೆದಿದ್ದಾನೆ.  ಬಬ್ಬುಕಟ್ಟೆ ಹಿರಾ ಪ್ರಾಥಮಿಕ ಶಾಲೆಯಲ್ಲಿ 6 ನೇ ತರಗತಿಯಲ್ಲಿ ಕಲಿಯುತ್ತಿರುವ ಈತ ಕೊರೊನಾ ಹಿನ್ನೆಲೆಯಲ್ಲಿ ಶಾಲೆ ರಜೆಯಿರುವುದರಿಂದ ಹೆತ್ತವರ ವಿಡಿಯೋದಲ್ಲಿ ಚಾನೆಲ್ ರೂಪಿಸಿ ಅದನ್ನು  subscribe ಮಾಡುವಂತೆ ಸೆಲ್ಪಿ ವಿಡಿಯೋ ಮಾಡಿ ಹಾಕಿದ್ದ. ಈತ subscribe ಎಂದು ಹೇಳಲು ಸಾಧ್ಯವಾಗದೆ ಪರದಾಡುತ್ತಿರುವ ದೃಶ್ಯ ಇದರಲ್ಲಿದೆ.

(ಗಲ್ಫ್ ಕನ್ನಡಿಗ)30 ಸೆಕೆಂಡ್ ನ ಈ ವಿಡಿಯೋ ವನ್ನು ನೋಡಿದ ಕಾಮಿಡಿಯನ್ ಆಶಿಸ್ ಚಂಚ್ಲಾನಿಯವರು ಇದನ್ನು ತಮ್ಮ Instagram ನಲ್ಲಿ ಅಪ್ಲೋಡ್ ಮಾಡಿದ್ದರು. ಈ ವಿಡಿಯೋ ಗೆ ಬಹುಭಾಷ ಹಿನ್ನೆಲೆ ಗಾಯಕ ಅರ್ಮಾನ್   ಮಲಿಕ್ ಕೂಡ ಕಮೆಂಟ್ ಮಾಡಿದ್ದರು.  ಈ ವಿಡಿಯೋ 35 ಲಕ್ಷಕ್ಕೂ ಅಧಿಕ ವೀಕ್ಷಣೆ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.