ಫೇಸ್‌ಬುಕ್ ನಲ್ಲಿ ತಲಾಖ್, online ನಲ್ಲಿ ಕಂಪ್ಲೆಂಟ್, ಉಡುಪಿ ಪೊಲೀಸರಿಂದ ಅರೆಸ್ಟ್
Sunday, August 9, 2020
(ಗಲ್ಫ್ ಕನ್ನಡಿಗ)ಉಡುಪಿ; ತ್ರಿವಳಿ ತಲಾಖ್ ಗೆ ಕೇಂದ್ರ ಸರಕಾರ ನಿಷೇಧವೇರಿದ್ದರು ಉಡುಪಿ ಮೂಲದ ವ್ಯಕ್ತಿ ಫೇಸ್ ಬುಕ್ ನಲ್ಲಿ ತ್ರಿವಳಿ ತಲಾಖ್ ಘೋಷಿಸಿ ಪೊಲೀಸರ ಅತಿಥಿಯಾಗಿದ್ದಾನೆ.
(ಗಲ್ಫ್ ಕನ್ನಡಿಗ)ಶಿರ್ವದ ಶೇಕ್ ಮೊಹಮ್ಮದ್ ಸಲೀಂ (38) ಎಂಬಾತ ಪತ್ನಿಗೆ ತ್ರಿವಳಿ ತಲಾಖ್ ನೀಡಿದಾತ. ಈತ ಉಡುಪಿ ಜಿಲ್ಲೆಯ ಶಿರ್ವ ಜಾಮಿಯಾ ಮಸೀದಿ ಸಮೀಪದ ನಿವಾಸಿಯಾಗಿದ್ದು 2010ರ ಸೆ.23 ರಂದು ವಿವಾಹವಾಗಿದ್ದ.
(ಗಲ್ಫ್ ಕನ್ನಡಿಗ) ಮದುವೆ ನಂತರ ಪತ್ನಿ ಮತ್ತು ಮಗಳ ಜೊತೆ ಸೌದಿ ಅರೇಬಿಯಾದ ದಮ್ಮಾಮ್ನಲ್ಲಿ ವಾಸವಿದ್ದ ಈತ ಆಗಸ್ಟ್ 3ರಂದು ದಮಾಮ್ ನಿಂದ ಮುಂಬಯಿ ಗೆ ಬಂದಿದ್ದಾನೆ.
ಈತ ತನ್ನ ಪತ್ನಿ ಹಾಗೂ ಮಗಳನ್ನು ದಮ್ಮಾಮ್‌ನಲ್ಲಿಯೇ ಬಿಟ್ಟು ಮತ್ತೊಬ್ಬ ಮಹಿಳೆಯೊಂದಿಗೆ ಮುಂಬಯಿ ಗೆ ಬಂದಿದ್ದ. ಬಳಿಕ ಈತ ತನ್ನ ಫೇಸ್‌ಬುಕ್ ಖಾತೆಯಲ್ಲಿ ಪತ್ನಿ ಗೆ ತ್ರಿವಳಿ ತಲಾಖ್ ಎಂದು ಪೋಸ್ಟ್ ಮಾಡಿದ್ದಾನೆ.
(ಗಲ್ಫ್ ಕನ್ನಡಿಗ) ಪತಿಯ ಏಕಾಏಕಿ ನಿರ್ಧಾರದಿಂದ ದಿಕ್ಕೆ ತೋಚದ ದಮ್ಮಾಮ್‌ನಲ್ಲಿರುವ ಪತ್ನಿ ಆನ್‌ಲೈನ್‌ನಲ್ಲಿ ಪತಿಯ ವಿರುದ್ಧ ದೂರು ನೀಡಿದ್ದಾಳೆ.ದೂರಿನ ಆಧಾರದಲ್ಲಿ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿತ್ತು.
(ಗಲ್ಫ್ ಕನ್ನಡಿಗ) ಆಗಷ್ಟ್ 7 ರಂದು ಮುಂಬಯಿಂದ ಊರಿಗೆ ಬಂದಿದ್ದ ಆರೋಪಿ ಸಲೀಂನನ್ನು ಶಿರ್ವ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.