Shocking video : ತುಂಬಿ ಹರಿಯುತ್ತಿರುವ ನದಿಗೆ ಸೇತುವೆಯಿಂದ ಹಾರಿದ ಯುವಕರು!
Sunday, August 9, 2020
(ಗಲ್ಫ್ ಕನ್ನಡಿಗ)ಮಂಗಳೂರು; ಭಾರಿ ಮಳೆಗೆ ನೇತ್ರಾವತಿ ನದಿ ತುಂಬಿ ಹರಿಯುತ್ತಿದೆ. ನದಿಯಲ್ಲಿ ರಭಸದಿಂದ ಹರಿಯುವ ನೀರು ಎಂತವರ ಎದೆಯನ್ನು ಧಸಕ್ಕೆನಿಸುತ್ತದೆ. ಇಂತಹ ಸ್ಥಿತಿಯಲ್ಲಿ ಬಂಟ್ವಾಳದ ಪಾಣೆಮಂಗಳೂರಿನಲ್ಲಿ ನದಿಯಲ್ಲಿ ಯುವಕರು ಹುಚ್ಚಾಟವೆಸಗಿದ್ದಾರೆ.
(ಗಲ್ಫ್ ಕನ್ನಡಿಗ)ಪಾಣೆಮಂಗಳೂರಿನ ಹಳೆ ಸೇತುವೆ ಮೇಲಿನಿಂದ ನೇತ್ರಾವತಿ ನದಿಗೆ ಕೆಲವು ಯುವಕರು ಹಾರುವ ದೃಶ್ಯ ಇದೀಗ ವೈರಲ್ ಆಗಿದೆ. ಯುವಕರ ಅಪಾಯಕಾರಿ ಈಜು ಜನರ ಆತಂಕಕ್ಕೆ ಕಾರಣವಾಗಿದೆ.
(ಗಲ್ಫ್ ಕನ್ನಡಿಗ)ಪಾಣೆಮಂಗಳೂರಿನಲ್ಲಿ ನುರಿತ ಈಜುಗಾರರ ತಂಡವೇ ಇದೆ. ಈಜಿನಲ್ಲಿ ಪಳಗಿದ ಯುವಕರ ಗುಂಪು ಅಪಾಯಕಾರಿ ಈಜುವ ಸಾಹಸಕ್ಕೆ ಕೈಹಾಕಿದೆ.
(ಗಲ್ಫ್ ಕನ್ನಡಿಗ)ಪಾಣೆಮಂಗಳೂರು ಹಳೆ ಸೇತುವೆ ಮೇಲಿನಿಂದ ಯುವಕರು ಹಾರಿ ನೇತ್ರಾವತಿ ನದಿಯಲ್ಲಿ ಈಜಿ ದಡಕ್ಕೆ ಸೇರುವ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.