ಮಂಗಳೂರಿನಲ್ಲಿ ಸರಕಾರಿ ಕಚೇರಿಗೆ ಕಲ್ಲು ಹೊಡೆದ ದುಷ್ಕರ್ಮಿಗಳು
Friday, August 14, 2020
(ಗಲ್ಪ್ ಕನ್ನಡಿಗ)ಮಂಗಳೂರು: ಮಂಗಳೂರಿನಲ್ಲಿ ದುಷ್ಕರ್ಮಿಗಳು ಸರಕಾರಿ ಕಚೇರಿಗೆ ಕಲ್ಲು ಹೊಡೆದಿದ್ದಾರೆ.
(ಗಲ್ಪ್ ಕನ್ನಡಿಗ)ಮಂಗಳೂರಿನ ಪಾಂಡೇಶ್ವರದ ಓಲ್ಡ್ ಕೆಂಟ್ ರಸ್ತೆಯಲ್ಲಿರುವ ಮೌಲನಾ ಆಝಾದ್ ಅಲ್ಪಸಂಖ್ಯಾತರ ಭವನಕ್ಕೆ ಕಲ್ಲು ತೂರಲಾಗಿದೆ. ನಿನ್ನೆ ರಾತ್ರಿ ದುಷ್ಕರ್ಮಿಗಳು ಕಲ್ಲು ಎಸೆದು ಪರಾರಿಯಾಗಿದ್ದು ಇಂದು ಮುಂಜಾನೆ ಸಿಬ್ಬಂದಿಗಳು ಕಚೇರಿಗೆ ಬರುವಾಗ ಕಲ್ಲು ಹೊಡೆದದ್ದು ಬೆಳಕಿಗೆ ಬಂದಿದೆ. ಕಲ್ಲು ಎಸೆದ ಪರಿಣಾಮ ಕಿಟಕಿ ಗಾಜುಗಳಿಗೆ ಹಾನಿಯಾಗಿದೆ.
ಗಲ್ಫ್ ಕನ್ನಡಿಗ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಶಾಂತಿ ಕದಡುವ ಯತ್ನವಾಗಿ ಕಲ್ಲುಹೊಡೆದಿರುವ ಸಾಧ್ಯತೆ ಇದ್ದು ಪಾಂಡೇಶ್ವರ ಪೊಲೀಸರು ಪ್ಕರಣ ದಾಖಲಿಸಿದ್ದಾರೆ. ಸರಕಾರಿ ಕಚೇರಿಗೆ ಪೊಲೀಸ್ ಭದ್ರತೆಯನ್ನು ನೀಡಲಾಗಿದೆ.
(ಗಲ್ಪ್ ಕನ್ನಡಿಗ)