-->

ಮಂಗಳೂರನ್ನು ನಡುಗಿಸಿದ್ದ ಎಕ್ಕೂರು ಬಾಬ ನಿಧನ

ಮಂಗಳೂರನ್ನು ನಡುಗಿಸಿದ್ದ ಎಕ್ಕೂರು ಬಾಬ ನಿಧನ

 

ಮಂಗಳೂರು ಮೂರು ದಶಕಗಳ ಹಿಂದೆ ಗ್ಯಾಂಗ್ ಕಟ್ಟಿಕೊಂಡು ರೌಡಿಸಂ ಮಾಡುತ್ತಾ ಇಡೀ ಮಂಗಳೂರನ್ನು ನಡುಗಿಸಿದ್ದ ಎಕ್ಕೂರು ಬಾಬಾ (61) ಇಂದು ನಿಧನರಾಗಿದ್ದಾರೆ.

ಗಲ್ಫ್ ಕನ್ನಡಿಗ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಅವರು ಲಿವರ್ ಕಾಯಿಲೆಯಿಂದ ಬಳಲುತ್ತಿದ್ದು ಇಂದು ಸಂಜೆ ಹೃದಾಯಾಘಾತದಿಂದ ಸಾವನ್ನಪ್ಪಿದ್ದಾರೆ. ಎಕ್ಕೂರು ಬಾಬ ಮೂಲ ಹೆಸರು ಸುಭಕರ್ ಶೆಟ್ಟಿ. ಆದರೆ ಸುಭಕರ್ ಶೆಟ್ಟಿ ಎಕ್ಕೂರು ಬಾಬ ಎಂದೆ ಚಿರಪರಿಚಿತರಾಗಿದ್ದಾರೆ. ಮುಡಿಪುವಿನ ಪೃಥ್ವಿಪಾಲ್ ರೈ ಕೊಲೆ ಪ್ರಕರಣ ಸೇರಿದಂತೆ ಕೊಲೆ, ಕೊಲೆಯತ್ನ, ಹಫ್ತಾ ವಸೂಲಿ ಸೇರಿದಂತೆ ಹಲವು ಪ್ರಕರಣಗಳನ್ನು ಎದುರಿಸುತ್ತಿದ್ದರು.


1983 ರಲ್ಲಿ ಎಕ್ಕೂರು ಬಾಬ ರೌಡಿಸಂಗೆ ಕಾಲಿಟ್ಟಿದ್ದರು. ಸಣ್ಣ ಪುಟ್ಟ ಹಪ್ತಾ ವಸೂಲಿ ಮಾಡುತ್ತಿದ್ದ ಎಕ್ಕೂರು ಬಾಬನನ್ನು ರೌಡಿಸಂಗೆ ಪೊಲೀಸರು ಬಂಧಿಸಿದ್ದಾಗ 21 ವರ್ಷದ ಯುವಕರಾಗಿದ್ದರು.

ಎಕ್ಕೂರಿನಲ್ಲಿ ಯುವಸೇನೆ ಹೆಸರಲ್ಲಿ ಸಂಘಟನೆ ಕಟ್ಟಿಕೊಂಡಿದ್ದ ಗುಣಕರ ಶೆಟ್ಟಿ 1991 ರಲ್ಲಿ ಕೊಲೆಯಾದ ಬಳಿಕ ಎಕ್ಕೂರಿನಲ್ಲಿ ಪ್ರಬಲನಾದ ಎಕ್ಕೂರು ಬಾಬ ಗ್ಯಾಂಗ್ ಕಟ್ಟಿಕೊಂಡು ರೌಡಿಸಂ ಆರಂಭಿಸಿದರು.

1995 ರಿಂದ 2005 ರ ಮಧ್ಯೆ ಮಂಗಳೂರಿನಲ್ಲಿ ಸ್ವಲ್ಪಮಟ್ಟಿಗೆ ಹೆಸರನ್ನೂ ಮಾಡಿದ್ದ. 2002ರಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಿದ್ದ ಪೃಥ್ವಿಪಾಲ್ ರೈಯನ್ನು ಮುಡಿಪುವಿನ ಮಂಗಳಾ ಬಾರ್ ನಲ್ಲಿ ದಾಳಿ ಮಾಡಿ ಕೊಲ್ಲುವಂತೆ ಸ್ಕೆಚ್ ರೂಪಿಸಿದ್ದು ಇದೇ ಎಕ್ಕೂರು ಗ್ಯಾಂಗ್.

ಕಳೆದ 15 ವರ್ಷಗಳಲ್ಲಿ ಯುವಸೇನೆಯಲ್ಲಿ ಗುರುತಿಸಿಕೊಂಡಿದ್ದ ಎಕ್ಕೂರು ಬಾಬಾ, ಮಂಗಳೂರಿನ ನೆಹರು ಮೈದಾನದ ಗಣೇಶೋತ್ಸವ ಮೆರವಣಿಗೆಯಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಹಲವು ವರ್ಷಗಳಲ್ಲಿ ಭೂಗತ ಚಟುವಟಿಕೆಗಳಲ್ಲಿ ಪಾಲ್ಗೊಂಡು ಬಳಿಕ ಮನಪರಿವರ್ತನೆಗೊಂಡು ಸಮಾಜದ ಮುಖ್ಯವಾಹಿನಿಗೆ ಮರಳಿದ್ದರು. ಸಾಮಾಜಿಕ, ಧಾರ್ಮಿಕ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ಎಕ್ಕೂರು ಬಾಬಾ ಅವರು ಸಾಮಾಜಿಕ ಚಟುವಟಿಕೆಗಳ ಮೂಲಕ ಹೆಸರು ಪಡೆದಿದ್ದರು.


Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99