SSLC ಟಾಪರ್ ಗೆ ಬಿಜೆಪಿ ರಾಜ್ಯಾಧ್ಯಕ್ಷ ಅಭಿನಂದನೆ
Monday, August 17, 2020
(ಗಲ್ಫ್ ಕನ್ನಡಿಗ)ಮಂಗಳೂರು; SSLC ಯಲ್ಲಿ 625 ಅಂಕಪಡೆದು ರಾಜ್ಯಕ್ಕೆ ಪ್ರಥಮ ಮತ್ತು 620 ಅಂಕ ಪಡೆದ ವಿದ್ಯಾರ್ಥಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಭಿನಂದಿಸಿದರು.
(ಗಲ್ಫ್ ಕನ್ನಡಿಗ)ಸಂಸದರ ಆದರ್ಶ ಗ್ರಾಮ ಬಳ್ಪಕ್ಕೆ ಭೇಟಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625ರಲ್ಲಿ 625 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಸಾಧನೆಗೈದ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದಲ್ಲಿ ಕಲಿಯುತ್ತಿರುವ ಬಳ್ಪ ಗ್ರಾಮದ ವಿದ್ಯಾರ್ಥಿ ಅನುಶ್ ಹಾಗೂ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625ರಲ್ಲಿ 600 ಅಂಕ ಗಳಿಸಿದ ವಿದ್ಯಾಭೋದಿನಿ ಹೈಸ್ಕೂಲ್ ಬಾಳಿಲದಲ್ಲಿ ಕಲಿಯುತ್ತಿರುವ ಬಳ್ಪ ಗ್ರಾಮದ ವಿದ್ಯಾರ್ಥಿನಿ ಆಶಿತಾ ವಿ ಇವರುಗಳನ್ನು
ಭೇಟಿಯಾಗಿ ಅಭಿನಂದಿಸಿದರು.
(ಗಲ್ಫ್ ಕನ್ನಡಿಗ)ಈ ಸಂದರ್ಭದಲ್ಲಿ ಸುಳ್ಯ ಶಾಸಕ ಶ್ರೀ ಎಸ್ ಅಂಗಾರ, ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷ ಶ್ರೀ ಹರೀಶ್ ಕಂಜಿಪಿಲಿ ಹಾಗೂ ಇತರ ಪ್ರಮುಖರು ಉಪಸ್ಥಿತರಿದ್ದರು.
(ಗಲ್ಫ್ ಕನ್ನಡಿಗ)