![ಉಡುಪಿ ದೋಣಿ ದುರಂತ; ಓರ್ವ ಮೀನುಗಾರನ ಮೃತದೇಹ ಪತ್ತೆ ಉಡುಪಿ ದೋಣಿ ದುರಂತ; ಓರ್ವ ಮೀನುಗಾರನ ಮೃತದೇಹ ಪತ್ತೆ](https://blogger.googleusercontent.com/img/b/R29vZ2xl/AVvXsEjdUGnWFSVXTLDYIG48-cJVphyphenhyphenqsNR919-W1KBNB84d9LRhUSvmufqpsOtpBf1-TYimXSsZnMpa5S26czE9SpPHJtDzDYWlg20K4eRrJTsVffsypQ8vo0H5KhRGzlabXjH4dQmh1MX0pC4/s1600/1597636828758529-0.png)
ಉಡುಪಿ ದೋಣಿ ದುರಂತ; ಓರ್ವ ಮೀನುಗಾರನ ಮೃತದೇಹ ಪತ್ತೆ
Monday, August 17, 2020
(ಗಲ್ಪ್ ಕನ್ನಡಿಗ)ಉಡುಪಿ: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಡೆರಿಯಲ್ಲಿ ನಿನ್ನೆ ನಡೆದ ದೋಣಿ ದುರಂತದಲ್ಲಿ ನೀರುಪಾಲಾದ ಓರ್ವ ಮೀನುಗಾರನ ಮೃತದೇಹ ಸಿಕ್ಕಿದೆ.
(ಗಲ್ಪ್ ಕನ್ನಡಿಗ)ಸಾಗರಶ್ರೀ ಎಂಬ ನಾಡದೋಣಿಯಲ್ಲಿ 9 ಮಂದಿ ಮೀನುಗಾಗರರು ನಿನ್ನೆ ಬೆಳಿಗ್ಗೆ 10.30 ರ ಸುಮಾರಿಗೆ ಮೀನುಗಾರಿಕೆಗೆ ತೆರಳಿದ್ದರು. ಸಮುದ್ರದ ದೈತ್ಯ ಅಲೆಗೆ ದೋಣಿ ಸಿಲುಕಿ ಮಗುಚಿ ಬಿದ್ದ ಪರಿಣಾಮ ದೋಣಿಯಲ್ಲಿದ್ದ ಲಕ್ಷ್ಮಣ್ ಖಾರ್ವಿ, ಶೇಖರ್, ಮಂಜುನಾಥ್ , ನಾಗರಾಜ್ ಖಾರ್ವಿ ನೀರುಪಾಲಾಗಿದ್ದರು. ಉಳಿದ ಮೀನುಗಾರರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಪತ್ತೆಯಾದ ಇನ್ನೂ ಮೂವರ ಶೋಧಕಾರ್ಯ ನಡೆಯುತ್ತಿದೆ.
(ಗಲ್ಪ್ ಕನ್ನಡಿಗ)