ಮೈಸೂರಿನ ಚಾಮುಂಡಿಬೆಟ್ಟಕ್ಕೆ 2 ದಿನ ಪ್ರವೇಶ ನಿಷೇಧ
Monday, August 17, 2020
(ಗಲ್ಪ್ ಕನ್ನಡಿಗ)
ಮೈಸೂರು: ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭಕ್ತರ ಪ್ರವೇಶವನ್ನು ಆಗಸ್ಟ್ 19 ಮತ್ತು 21 ರಂದು ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ.
(ಗಲ್ಫ್ ಕನ್ನಡಿಗ) ಆಗಷ್ಟ್ 19 ಬುಧವಾರದಂದು ಅಮಾವಾಸ್ಯೆ ಹಾಗೂ ಆಗಷ್ಟ್ 21 ರಂದು ಶುಕ್ರವಾರ ಸ್ವರ್ಣಗೌರಿ ವೃತದ ಹಿನ್ನೆಲೆಯಲ್ಲಿ ಈ ಆದೇಶ ಮಾಡಲಾಗಿದೆ. ಈ ಎರಡು ದಿನ ಬೆಟ್ಟಕ್ಕೆ ಬರುವ ಭಕ್ತರು ಹೆಚ್ಚುವ ಕಾರಣ ಈ ನಿರ್ಬಂಧ ವಿಧಿಸಲಾಗಿದೆ. ಭಕ್ತರು ಹೆಚ್ಚು ಆಗಮಿಸುವುದರಿಂದ ಸಾಮಾಜಿಕ ಅಂತರ ಹಾಗೂ ಇತರ ಕೋವಿಡ್ ನಿಯಮಗಳ ಪಾಲನೆ ಕಷ್ಟವಾಗಿದ್ದು ಹೀಗಾಗಿ ಭಕ್ತರ ಪ್ರವೇಶವನ್ನು ನಿರ್ಬಂಧಿಸಿ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್.ಜಿ.ಶಂಕರ್ ಆದೇಶ ಹೊರಡಿಸಿದ್ದಾರೆ.
(ಗಲ್ಫ್ ಕನ್ನಡಿಗ)