ಚಿತ್ರದುರ್ಗದಲ್ಲೊಂದು ಕಳ್ಳರ ಭೀಕರ ಕೃತ್ಯ; ಹಂದಿ ಕದಿಯಲು ಬಂದವರಿಂದ ಮೂವರ ಕೊಲೆ(ಗಲ್ಫ್ ಕನ್ನಡಿಗ)ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯಲ್ಲಿ ಹಂದಿ ಕದಿಯಲು ಬಂದವರು ಮೂವರನ್ನು ಕೊಲೆ ಮಾಡಿದ ಘಟನೆ ನಡೆದಿದೆ‌

(ಗಲ್ಫ್ ಕನ್ನಡಿಗ)ಚಳ್ಳಕೆರೆಯ ನಾಯಕನಹಟ್ಟಿ ಗ್ರಾಮದಲ್ಲಿ  ಮಾರೇಶ್,  ಮಗ ಶೀನಪ್ಪ ಹಾಗು ತಮ್ಮನ ಮಗ ಯಲ್ಲೇಶ್ ಕೊಲೆಯಾಗಿದ್ದಾರೆ. ಇವರು ಹಂದಿ ಸಾಕುವ ಕಾರ್ಯ ಮಾಡುತ್ತಿದ್ದರು.

(ಗಲ್ಫ್ ಕನ್ನಡಿಗ)ಹಂದಿ‌ ಕದಿಯಲು ಬಂದವರು ಹತ್ಯೆ ಮಾಡಿರುವ ಶಂಕೆ ವ್ಯಕ್ತಪಡಿಸಿರುವ ಪೊಲೀಸರು ಪರಾರಿಯಾಗಿರುವ ಆರೋಪಿಗಳ  ಶೋಧ ನಡೆಸುತ್ತಿದ್ದಾರೆ.

(ಗಲ್ಫ್ ಕನ್ನಡಿಗ)ಮೂವರ ಮೇಲೆ ಖಾರದ ಪುಡಿ ಎರಚಿ ಕೊಲೆ ಮಾಡಿರುವ ಮತ್ತು ವಾಹನದಲ್ಲಿ ಬಂದಿರುವ  ಕುರುಹು ಪತ್ತೆಯಾಗಿದೆ.  ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

(ಗಲ್ಫ್ ಕನ್ನಡಿಗ)