ಬಂಟ್ವಾಳದಲ್ಲಿ ತಲೆಕೆಳಗಾದ ರಾಷ್ಟ್ರಧ್ವಜ: ರಾತ್ರಿವರೆಗೂ ಹಾರಾಟ
Monday, August 17, 2020
(ಗಲ್ಫ್ ಕನ್ನಡಿಗ)ಮಂಗಳೂರು:ರಾಷ್ಟ್ರ ಧ್ವಜಕ್ಕೆ ಗ್ರಾಮ ಪಂಚಾಯತ್‌ನಿಂದಲೇ ಅಪಮಾನ ಎಸಗಲಾಗಿದೆ.
(ಗಲ್ಫ್ ಕನ್ನಡಿಗ)ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮ ಪಂಚಾಯತ್ ನಲ್ಲಿ ಈ ಘಟನೆ ನಡೆದಿದೆ.
ರಾಷ್ಟ್ರ ಧ್ವಜವನ್ನು ಉಲ್ಟಾ ಹಾರಿಸಿ ಅಪಮಾನ ಮಾಡಿದ್ದು ಮಾತ್ರವಲ್ಲದೆ ರಾತ್ರಿ ಪೂರ್ತಿ ಕತ್ತಲಲ್ಲೇ ರಾಷ್ಟ್ರ ಧ್ವಜ ಹಾರಿದೆ.
(ಗಲ್ಫ್ ಕನ್ನಡಿಗ) ಇದನ್ನು ಗಮನಿಸಿದ ಹಿಂದೂಸಂಘಟನೆಯ ಕಾರ್ಯಕರ್ತರು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಪಂಚಾಯತ್ ಅವರಣದಲ್ಲಿ ಸ್ಥಳೀಯರು ಜಮಾಯಿಸುತ್ತಿದ್ದಂತೆ ಮಾಹಿತಿ ಪಡೆದ ಪಂಚಾಯತ್ ಸಿಬ್ಬಂದಿಯೋರ್ವರು ಅಗಮಿಸಿ ರಾಷ್ಟ್ರಧ್ವಜವನ್ನು ಕೆಳಗಿಳಿಸಿದ್ದಾರೆ .
(ಗಲ್ಫ್ ಕನ್ನಡಿಗ)