ಗುಂಡ್ಯದಲ್ಲಿ ಆಕಸ್ಮಿಕ ಬೆಂಕಿ ತಗುಲಿ ಭಾಗಶಃ ಸುಟ್ಟು ಹೋದ ಲಾರಿ
Monday, August 17, 2020
(ಗಲ್ಫ್ ಕನ್ನಡಿಗ)ಮಂಗಳೂರು; ಗುಂಡ್ಯ ಸಮೀಪದಲ್ಲಿ ಸಿಮೆಂಟ್ ಸಾಗಾಟದ ಲಾರಿಯೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿದೆ.
(ಗಲ್ಫ್ ಕನ್ನಡಿಗ)ಇಂದು ಮುಂಜಾನೆ ಈ ಘಟನೆ ನಡೆದಿದ್ದು ಬೆಂಕಿಗೆ ಲಾರಿ ಭಾಗಶ: ಸುಟ್ಟುಹೋಗಿದೆ.
(ಗಲ್ಫ್ ಕನ್ನಡಿಗ) ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬೆಂಗಳೂರಿನಿಂದ ಮಂಗಳೂರು ಕಡೆಗೆ ಸಿಮೆಂಟ್ ಸಾಗಾಟ ಮಾಡುತ್ತಿದ್ದ ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.ಬೆಂಕಿ ತಗುಲಿರುವುದು ಗಮನಕ್ಕೆ ಬಂದ ಕೂಡಲೇ ಚಾಲಕ ಲಾರಿ ನಿಲ್ಲಿಸಿದ್ದು, ಅಗ್ನಿಶಾಮಕ ಸಿಬ್ಬಂದಿಗಳು,ಸ್ಥಳೀಯರ ಸಹಕಾರದಿಂದ ಬೆಂಕಿ ನಂದಿಸಲಾಗಿದೆ.
ಬೆಂಕಿಯಿಂದಾಗಿ ಲಾರಿಯ ಟಯರ್ ಸುಟ್ಟುಹೋಗಿದ್ದು ಹೆಚ್ಚಿನ ಅನಾಹುತ ನಡೆದಿಲ್ಲ . ಲಾರಿ ಚಾಲಕ, ಕ್ಲೀನರ್ ಅಪಾಯದಿಂದ ಪಾರಾಗಿದ್ದಾರೆ.
(ಗಲ್ಫ್ ಕನ್ನಡಿಗ)