ವಿಶ್ವದ ಯಾವುದೇ ಭಾಗದಲ್ಲಿದ್ದರೂ ದ.ಕ ಜಿಲ್ಲೆಯ ಪ್ರಥಮ ಪಿಯುಸಿಗೆ ಅರ್ಜಿಸಲ್ಲಿಸಿ: online application ಗೆ ಇಲ್ಲಿ ಕ್ಲಿಕ್ ಮಾಡಿ
Monday, August 17, 2020
(ಗಲ್ಫ್ ಕನ್ನಡಿಗ)ಮಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ಪ್ರಥಮ ಪಿಯುಸಿ ಗೆ ಅರ್ಜಿ ಸಲ್ಲಿಸಲು ಆನ್ ಲೈನ್ ವ್ಯವಸ್ಥೆ ಜಾರಿಗೆ ತರಲಾಗಿದೆ.
(ಗಲ್ಫ್ ಕನ್ನಡಿಗ)ಪ್ರಥಮ ಪಿಯುಸಿ ತರಗತಿಗಳಿಗೆ ಜಿಲ್ಲೆಯ ಕಾಲೇಜುಗಳಿಗೆ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳಲು ಪ್ರಾಯೋಗಿಕವಾಗಿ online application ತಂತ್ರಾಂಶವನ್ನು ತಯಾರಿಸಲಾಗಿದೆ.
(ಗಲ್ಫ್ ಕನ್ನಡಿಗ)ಆಗಷ್ಟ್ 17 ರಿಂದ ಈ ಕಾಲೇಜುಗಳಿಗೆ ಪ್ರಥಮ ಪಿ ಯು ಸಿ ದಾಖಲಾತಿಗಾಗಿ ವಿಶ್ವದ ಯಾವುದೇ ಭಾಗದಿಂದ ವಿದ್ಯಾರ್ಥಿಗಳು online application ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.
(ಗಲ್ಫ್ ಕನ್ನಡಿಗ)ವಿದ್ಯಾರ್ಥಿಗಳು online ಅಪ್ಲಿಕೇಶನ್ ಸಲ್ಲಿಸಲು https://apply.dkpucpa.com ಗೆ ಲಾಗಿನ್ ಆಗಬೇಕು. ಅದರಲ್ಲಿ online application ಸೌಲಭ್ಯ ವನ್ನು ಹೊಂದಿರುವ ಕಾಲೇಜುಗಳ ವಿವರ ಹಾಗೂ ಸಹಾಯವಾಣಿ ಪಟ್ಟಿ ಯ ಲಿಂಕ್ ನ್ನು ವೀಕ್ಷಿಸಿ ದಾಖಲಾತಿ ಬಯಸುವ ಯಾವುದೇ ಕಾಲೇಜಿನ ಸಹಾಯವಾಣಿಗೆ ಕರೆಮಾಡಿ application ನಂಬರ್ ಮತ್ತು ಸೆಕ್ಯುರಿಟಿ ಕೋಡನ್ನು ಪಡೆದುಕೊಂಡು ದಾಖಲಾತಿ ಅರ್ಜಿಯನ್ನು ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. Online application ಸಲ್ಲಿಸುವ ಬಗೆಗಿನ ಎಲ್ಲಾ ವಿವರಗಳನ್ನು https://apply.dkpucpa.com ರಲ್ಲಿ ಪಡೆದುಕೊಳ್ಳಬಹುದಾಗಿದೆ ಎಂದು ದ.ಕ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಅಧ್ಯಕ್ಷ ಉಮೇಶ್ ಕರ್ಕೇರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
(ಗಲ್ಫ್ ಕನ್ನಡಿಗ)