ಕೊತ್ತಂಬರಿ ಸೊಪ್ಪು: ಬೆಂಗಳೂರು ಗಲಾಟೆಯಲ್ಲಿ ಟ್ರೋಲ್! ಇಲ್ಲಿದೆ ಕೊತ್ತಮ್ಮರಿ ಸೊಪ್ಪು ಕಥೆ!
Monday, August 17, 2020
(ಗಲ್ಫ್ ಕನ್ನಡಿಗ)ಬೆಂಗಳೂರು; ನಿಖಿಲ್ ಎಲ್ಲಿದ್ದಿಯಪ್ಪ ಟ್ರೋಲ್ ಬಳಿಕ ಇದೀಗ ಕೊತ್ತಂಬರಿ ಸೊಪ್ಪು ಟ್ರೋಲ್ ಆಗಿದೆ. ಬೆಂಗಳೂರು ಗಲಾಟೆಯ ನಡುವೆ ಕೊತ್ತಂಬರಿ ಸೊಪ್ಪು ಟ್ರೋಲ್ ಹೆಚ್ಚಿನವರ ವಾಟ್ಸಪ್ ಸ್ಟೇಟಸ್ ಗಳಲ್ಲಿ ಜಾಗ ಪಡೆದುಕೊಂಡಿದೆ.
ಕೊತ್ತಂಬರಿ ಸೊಪ್ಪು ಟ್ರೋಲ್ ಆಗಲು ಕಾರಣವೇನು?
(ಗಲ್ಫ್ ಕನ್ನಡಿಗ)ಸುವರ್ಣ ನ್ಯೂಸ್ ವರದಿಗಾರ ಬೆಂಗಳೂರು ಗಲಭೆಯ ಹಿನ್ನೆಲೆಯಲ್ಲಿ ಸುದ್ದಿ ಮಾಡುತ್ತಿದ್ದಾಗ ಕೊತ್ತಂಬರಿ ಸೊಪ್ಪು ಪದ ಕಾಣಿಸಿಕೊಂಡಿದೆ. ಬೆಂಗಳೂರು ಗಲಭೆಯಲ್ಲಿ ಹಲವರನ್ನು ಬಂಧಿಸಲಾಗಿತ್ತು. ಬಂಧಿಸಿದ ಹಲವರ ಕುಟುಂಬಿಕರು ಬಂಧಿತ ಆರೋಪಿಗಳ ಪರ ವಹಿಸಿ ಆತ ತಪ್ಪು ಮಾಡಿಲ್ಲ ಎಂದು ವಾದಿಸುತ್ತಿದ್ದರು. ಅದೇ ರೀತಿ ಒರ್ವ ಆರೋಪಿಯ ತಂಗಿಯ ಅಭಿಪ್ರಾಯವನ್ನು ಸುವರ್ಣ ನ್ಯೂಸ್ ವರದಿಗಾರ ಕೇಳಿದ್ದಾನೆ. ಅದಕ್ಕೆ ಆರೋಪಿಯ ತಂಗಿ ರಾತ್ರಿ 1 ಗಂಟೆಗೆ ನನ್ನ ಅಣ್ಣ ಕೊತ್ತಂಬರಿ ಸೊಪ್ಪು ತರಲು ಅಂಗಡಿಗೆ ಹೋಗಿದ್ದ. ಆತ ಯಾವುದೇ ತಪ್ಪು ಮಾಡಿಲ್ಲ. ಪೊಲೀಸರು ಬಂಧಿಸಿದ್ದಾರೆ ಎಂದು ಹೇಳಿದ್ದಾರೆ.
ರಾತ್ರಿ ಒಂದು ವೇಳೆಗೆ ಕೊತ್ತಂಬರಿ ಸೊಪ್ಪು ತರಲು ಹೋಗಿದ್ದ ಎಂಬ ಪದ ಸಖತ್ ವೈರಲ್ ಆಗಿದೆ.
(ಗಲ್ಫ್ ಕನ್ನಡಿಗ)ರಾತ್ರಿ ಒಂದು ಗಂಟೆಯ ವೇಳೆ ಕೊತ್ತಂಬರಿ ಸೊಪ್ಪು ತರಲು ಹೋಗುವ ಸಮಯವಲ್ಲ. ಆ ಸಂದರ್ಭದಲ್ಲಿ ಅಂಗಡಿಗಳು ತೆರೆದಿರುವುದಿಲ್ಲ. ಅಂತಹ ಅಗತ್ಯದ ವಸ್ತುವು ಅದಲ್ಲ ಎಂಬರ್ಥದಲ್ಲಿ ಮಹಿಳೆ ಹೇಳಿದ ವಾಕ್ಯ ಟ್ರೋಲ್ ಆಗುತ್ತಿದೆ. ಸಿನಿಮಾ ಹಾಡಿಗೆ, ಸಿನಿಮಾ ತುಣಿಕಿಗೆ ಮಹಿಳೆಯ ರಾತ್ರಿ ಒಂದು ಗಂಟೆಗೆ ಕೊತ್ತಂಬರಿ ಸೊಪ್ಪು ತರಲು ಹೋಗಿದ್ದ ಎಂಬ ಪದ ಜೋಡಿಸಿ ಟ್ರೋಲ್ ಮಾಡಲಾಗುತ್ತಿದೆ.
(ಗಲ್ಫ್ ಕನ್ನಡಿಗ)ಇದೇ ಪದವನ್ನಿಟ್ಟುಕೊಂಡು ಸಚಿವ ಅಶೋಕ್ ಅವರು ಕೊತ್ತಂಬರಿ, ಕರಿಬೇವಿನ ಸೊಪ್ಪು ತರಲು ಹೋದವರ ಲಿಸ್ಟ್ ಎಲ್ಲಾ ಇದೆ. ಯಾವ ಯಾವ ಕಾಂಗ್ರೆಸ್ ನಾಯಕರ ಕೈಲಿ ಕೊತ್ತಂಬರಿ , ಕರಿಬೇವಿನ ಸೊಪ್ಪುಇದೆ ಅಂತ ಮಾಹಿತಿ ಇದೆ ಎಂದು ಲೇವಡಿ ಮಾಡಿದ್ದಾರೆ.