ಬೆಂಗಳೂರು ಗಲಭೆ : ಅಮಾಯಕರ ಬಂಧನ ನಿಲ್ಲಿಸಿ; ಪಾಪ್ಯುಲರ್ ಫ್ರಂಟ್ ಒತ್ತಾಯ
Monday, August 17, 2020
(ಗಲ್ಫ್ ಕನ್ನಡಿಗ)ಬೆಂಗಳೂರಿನ ಡಿಜೆ ಹಳ್ಳಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಘಟನೆಯಲ್ಲಿ ಪಾಲ್ಗೊಳ್ಳದ ಹಲವು ಅಮಾಯಕ ಯುವಕರನ್ನು ಪೊಲೀಸ್ ಇಲಾಖೆ ಗುರಿಪಡಿಸಿ ಬಂಧಿಸುತ್ತಿರುವ ಆರೋಪ ಕೇಳಿ ಬರುತ್ತಿದ್ದು, ಘಟನೆಯಲ್ಲಿ ಭಾಗಿಯಾದವರೆಂದುಕೊಂಡು 354ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಇದೀಗಾಗಲೇ ಬಂಧಿಸಿದ್ದು, ಇದರಲ್ಲಿ ಬಹುತೇಕ ಮಂದಿ ಅಮಾಯಕರು ಎನ್ನಲಾಗಿದೆ. ಪೊಲೀಸ್ ಇಲಾಖೆ ನಿರಂತರವಾಗಿ ನಡೆಸುತ್ತಿರುವ ಅಮಾಯಕರ ಬಂಧನವನ್ನು ಕೂಡಲೇ ನಿಲ್ಲಿಸಬೇಕೆಂದು ಪಾಪ್ಯುಲರ್ ಫ್ರಂಟ್ ರಾಜ್ಯ ಪ್ರಧಾನ ಕಾಯದರ್ಶಿ ನಾಸಿರ್ ಪಾಶಾ ಆಗ್ರಹಿಸಿದ್ದಾರೆ.
(ಗಲ್ಫ್ ಕನ್ನಡಿಗ)ಅಮಾಯಕ ಯುವಕರ ಮನೆಯವರು ಆರೋಪಿಸಿರುವಂತೆ ಪೊಲೀಸರು ಬಂಧಿಸಿರುವವರಲ್ಲಿ ಕುಟುಂಬದ ಆಧಾರ ಸ್ಥಂಭಗಳಾದ ಹಲವರರಿದ್ದು, ಇದೀಗ ಅವರ ಕುಟುಂಬದವರು ದಿಕ್ಕೆಟ್ಟ ಸ್ಥಿತಿಯಲ್ಲಿದೆ. ಗಲಭೆಯ ನಂತರ ಪೊಲೀಸರು ಕೈಗೊಂಡ ಕ್ರಮಗಳು ಸಂಪೂರ್ಣವಾಗಿ ಏಕಪಕ್ಷೀಯವಾಗಿದೆ. ಗಲಭೆಯಲ್ಲಿ ಪಾಲ್ಗೊಂಡವರಿದ್ದರೆ ನಿಷ್ಪಕ್ಷಪಾತವಾದ ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸಲಿ. ಆದರೆ ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿದು ಘಟನೆಗೆ ಸಂಬಂಧಪಡದ ಹಲವು ಅಮಾಯಕರನ್ನು ಬಂಧಿಸಿರುವುದು ಖಂಡನೀಯ, ಪೊಲೀಸರು ಅಮಾಯಕರ ಬಂಧನವನ್ನು ಈ ಕೂಡಲೇ ನಿಲ್ಲಿಸಿ,ಅಮಾಯಕರನ್ನು ಬಿಡುಗಡೆಗೊಳಿಸಲಿ ಎಂದು ಪಾಪ್ಯುಲರ್ ಫ್ರಂಟ್ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಸಿರ್ ಪಾಶಾ ಆಗ್ರಹಿಸಿದ್ದಾರೆ.
(ಗಲ್ಫ್ ಕನ್ನಡಿಗ)