ನಾಳೆ SSLC ಫಲಿತಾಂಶ ಪ್ರಕಟ ಎಂಬ ಸುಳ್ಳು ಸುದ್ದಿ ಪ್ರಕಟಿಸಿದ ಟಿವಿ ಮಾಧ್ಯಮ!

(ಗಲ್ಫ್ ಕನ್ನಡಿಗ) ಬೆಂಗಳೂರು; ಸುದ್ದಿಯನ್ನು ನೀಡುವ ಅವಸರದಲ್ಲಿ ಟಿವಿ ಮಾಧ್ಯಮ ವೊಂದು ಸುಳ್ಳು ಸುದ್ದಿಯನ್ನು ಬಿತ್ತರಿಸಿದೆ.

(ಗಲ್ಫ್ ಕನ್ನಡಿಗ)ಈ ಟಿವಿ ಚಾನೆಲ್ ನಾಳೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ ಎಂಬ ಸುದ್ದಿಯನ್ನು ಇಂದು ಬೆಳಿಗ್ಗೆ ಬಿತ್ತರಿಸಿದೆ. ಇದರಿಂದ ರಾಜ್ಯದ ಹಲವು ವಿದ್ಯಾರ್ಥಿಗಳು , ಶಿಕ್ಷಣ ಸಂಸ್ಥೆಗಳು ನಾಳೆ ಫಲಿತಾಂಶ ಪ್ರಕಟವಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದವು.

(ಗಲ್ಫ್ ಕನ್ನಡಿಗ)ಈ ಸುದ್ದಿಯನ್ನು ಪ್ರಕಟಿಸುವ ವೇಳೆ ಜವಾಬ್ದಾರಿ ಮಾಧ್ಯಮವಾಗಿ ಅಧಿಕೃತ ಮಾಹಿತಿ ಪಡೆಯದೆ ಸುದ್ದಿ ಮಾಡಿ ಟಿವಿ ಚಾನೆಲ್ ವಿದ್ಯಾರ್ಥಿಗಳನ್ನು,  ಸಾರ್ವಜನಿಕರನ್ನು ದಾರಿ ತಪ್ಪಿಸಿದೆ. 

(ಗಲ್ಫ್ ಕನ್ನಡಿಗ) ಈ ಬಗ್ಗೆ ಮೂಡಿರುವ ಗೊಂದಲಕ್ಕೆ ಕೊನೆಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರೆ ತೆರೆ ಎಳೆಯಬೇಕಾಯಿತು. "ನಾಳೆ SSLC ಫಲಿತಾಂಶ ಪ್ರಕಟ" 
 ಎಂಬ ಸುದ್ಧಿ ಸತ್ಯವಲ್ಲ. ಇನ್ನೂ ದಿನಾಂಕ ನಿಶ್ಚಯವಾಗಿಲ್ಲ ಎಂದು ಅವರು ಫೇಸ್ ಬುಕ್ ನಲ್ಲಿ ಸ್ಪಷ್ಟಪಡಿಸಿದ್ದಾರೆ. ಅವರು ಫೇಸ್‌ಬುಕ್‌ ನಲ್ಲಿ ಹಾಕಿದ ಸ್ಪಷ್ಟನೆಯಿಂದ ನಾಳೆ ಫಲಿತಾಂಶ ಪ್ರಕಟದ ವಿಷಯದಲ್ಲಿ ‌ಮೂಡಿದ ಗೊಂದಲಕ್ಕೆ ತೆರೆ ಬಿದ್ದಿದೆ.