ಅತ್ತೆ ಜೊತೆ ಡ್ಯಾನ್ಸ್ ಮಾಡಿದ ಶಿಲ್ಪಾ ಶೆಟ್ಟಿ ವಿಡಿಯೋ ವೈರಲ್; ಮಂಗಳೂರ ಚೆಲುವೆಯ ಡ್ಯಾನ್ಸ್ ಗೆ 10 ಲಕ್ಷಕ್ಕೂ ಅಧಿಕ ವೀಕ್ಷಣೆ (video)
Thursday, August 6, 2020
(ಗಲ್ಫ್ ಕನ್ನಡಿಗ)ಮಂಗಳೂರು; ಬಾಲಿವುಡ್ ನಟಿ , ಮಂಗಳೂರು ಚೆಲುವೆ ಶಿಲ್ಪ ಶೆಟ್ಟಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
(ಗಲ್ಫ್ ಕನ್ನಡಿಗ)ಇತ್ತೀಚೆಗೆ ಶಿಲ್ಪ ಶೆಟ್ಟಿಯು ಅತ್ತೆಯೊಂದಿಗೆ ಮಾಡಿದ ಡ್ಯಾನ್ಸ್ ಇದೀಗ ಸಖತ್ ವೈರಲ್ ಆಗಿದೆ.ಪಂಜಾಬಿ ಹಾಡು ಸೌದಾ ಖರಾ ಖರಾ ಎಂಬ ಹಾಡಿಗೆ ಅತ್ತೆ ಸೊಸೆ ಸಖತ್ ಸ್ಟೆಪ್ ಹಾಕಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅತ್ತೆಯ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಅತ್ತೆಯೊಂದಿಗೆ ಡ್ಯಾನ್ಸ್ ಮಾಡಿದ್ದಾರೆ.
(ಗಲ್ಫ್ ಕನ್ನಡಿಗ) ಶಿಲ್ಪ ಶೆಟ್ಟಿ ಡ್ಯಾನ್ಸ್ ಮಾಡುವ ವೇಳೆ ಪಕ್ಕದಲ್ಲಿ ನಿಂತುಕೊಂಡಿದ್ದ ಅತ್ತೆ ಕೂಡ ಸ್ಟೆಪ್ ಹಾಕಿ ಬರ್ತ್ ಡೇ ಆಚರಿಸಿಕೊಂಡಿದ್ದಾರೆ. ಈ ವಿಡಿಯೋವನ್ನು ಶಿಲ್ಪ ಶೆಟ್ಟಿ Instagram ನಲ್ಲಿ ಪೋಸ್ಟ್ ಮಾಡಿದ್ದಾರೆ.
(ಗಲ್ಫ್ ಕನ್ನಡಿಗ)ಅಮೇಜಿಂಗ್ ಅತ್ತೆಗೆ ಬರ್ತ್ ಡೇ ಶುಭಾಶಯ ಗಳು. ನೀವು ನಮ್ಮ ಕುಟುಂಬದ ಅಲ್ಟಿಮೇಟ್ ರಾಕ್ ಸ್ಟಾರ್. ನಿಮ್ಮನ್ನು ಅತ್ತೆಯಾಗಿ ಪಡೆದ ನಾನು ಅದೃಷ್ಟಶಾಲಿ. ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ. ಸೊಸೆಗೆ ಅತ್ತೆಯ ರೂಪದಲ್ಲಿ ಒಳ್ಳೆಯ ಡ್ಯಾನ್ಸ್ ಪಾರ್ಟನರ್ ಮತ್ತು ಗೆಳತಿ ಆಗಿದ್ದೀರಿ ಎಂದು ವಿಡಿಯೊದಲ್ಲಿ ಬರೆದುಕೊಂಡಿದ್ದಾರೆ.
(ಗಲ್ಫ್ ಕನ್ನಡಿಗ)ಈ ವಿಡಿಯೋ Instagram ನಲ್ಲಿ 10 ಲಕ್ಷಕ್ಕೂ ಅಧಿಕ ವೀಕ್ಷಣೆಯಾಗಿದ್ದು ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.