ಕಾಂಗ್ರೆಸ್ ನೊಂದಿಗೆ ಮೈತ್ರಿ ಮಾಡಿಕೊಂಡಿರುವ ಶಿವಸೇನೆ ರಾಮಮಂದಿರ ನಿರ್ಮಾಣಕ್ಕೆ ಕೊಟ್ಟ ದೇಣಿಗೆ ಎಷ್ಟು ಗೊತ್ತಾ?
(ಗಲ್ಪ್ ಕನ್ನಡಿಗ)ಮುಂಬಯಿ: ಅಯೋಧ್ಯೆಯಲ್ಲಿ ಶ್ರಿರಾಮಮಂದಿರ ನಿರ್ಮಾಣಕ್ಕೆ ಆ. 5 ರಂದು ಭೂಮಿಪೂಜೆ ನಡೆಯುತ್ತಿದೆ. ಈ ಭೂಮಿಪೂಜೆ ಯ ಸಂದರ್ಭದಲ್ಲಿ ಮಹಾರಾಷ್ಟ್ರದಲ್ಲಿ ಅಧಿಕಾರ ನಡೆಸುತ್ತಿರುವ ಶಿವಸೇನೆ ದೊಡ್ಡ ಮೊತ್ತದ ದೇಣಿಗೆಯನ್ನು ನೀಡಿದೆ.
(ಗಲ್ಪ್ ಕನ್ನಡಿಗ)ರಾಮಮಂದಿರ ನಿರ್ಮಾಣಕ್ಕೆ ಆರ್ ಎಸ್ ಎಸ್ ಎಷ್ಟು ಆದ್ಯತೆ ನೀಡಿತ್ತೋ ಅಷ್ಟೆ ಆದ್ಯತೆಯನ್ನು ಮಹಾರಾಷ್ಟ್ರದ ಶಿವಸೇನೆ ನೀಡಿತ್ತು. ಹಿಂದುತ್ವ ವಿಚಾರವನ್ನು ಇಟ್ಟುಕೊಂಡು ರಾಜಕಾರಣ ಮಾಡಿದ್ದ ಶಿವಸೇನೆ ಈ ಬಾರಿ ಅನಿವಾರ್ಯ ಪರಿಸ್ಥಿತಿಯಲ್ಲಿ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ನೊಂದಿಗೆ ಹೊಂದಾಣಿಕೆ ಮಾಡಿದೆ.
(ಗಲ್ಪ್ ಕನ್ನಡಿಗ)ಇದರ ನಡುವೆ ಶಿವಸೇನೆ ರಾಮಮಂದಿರ ನಿರ್ಮಾಣಕ್ಕೆ ಒಂದು ಕೋಟಿ ರೂ ದೇಣಿಗೆ ನೀಡಿದೆ. ಶಿವಸೇನೆ ಪಕ್ಷದ ವತಿಯಿಂದ ಒಂದು ಕೋಟಿ ರೂ ದೇಣಿಗೆ ನೀಡುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಭವ್ ಠಾಕ್ರೆ ಟ್ವೀಟ್ ಮಾಡಿದ್ದಾರೆ.
(ಗಲ್ಪ್ ಕನ್ನಡಿಗ)ಈ ಬಗ್ಗೆ ಅವರು ರಾಮ ಭೂಮಿ ನ್ಯಾಯಾಸ್ ಗೆ ಪತ್ರ ಬರೆದಿದ್ದು ತಂದೆ ಬಾಳಸಾಹೇಬ್ ಕರೆಯ ಮೇರೆಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಂದೋಲದಲ್ಲಿ ಸಾವಿರಾರು ಶಿವಸೈನಿಕರು ಭಾಗಿಯಾಗಿದ್ದರು. ಭಾಳಸಾಹೇಬ್ ಠಾಕ್ರೆ ಅವರು ಒಂದು ಕೋಟಿ ರೂ ಹಣ ನೀಡುವುದಾಗಿ ಘೋಷಣೆ ಮಾಡಿದ್ದರು. ಅದರಂತೆ ಒಂದು ಕೋಟಿ ರೂ ಠೇವಣಿ ಮಾಡುವುದಾಗಿ ಅವರು ತಿಳಿಸಿದ್ದಾರೆ