ಮೂಡಬಿದ್ರೆ ತಾ.ಪಂ ಚುನಾವಣೆಯಲ್ಲಿ ಪಕ್ಷಕ್ಕೆ ಕೈಕೊಟ್ಟ ಕಾಂಗ್ರೆಸ್ ಸದಸ್ಯ! - ನಡೆಯಿತ ಆಪರೇಷನ್ ಕಮಲ
Monday, August 3, 2020
(ಗಲ್ಫ್ ಕನ್ನಡಿಗ) ಮೂಡಬಿದ್ರೆ; ಮೂಡಬಿದ್ರೆ ತಾ.ಪಂ ನ ಮೊದಲ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹೈಡ್ರಾಮ ನಡೆದಿದೆ. ಸಮಬಲ ಹೊಂದಿದ ಬಿಜೆಪಿ ಮತ್ತು ಕಾಂಗ್ರೆಸ್ ಅಧಿಕಾರದ ಮೇಲೆ ಕಣ್ಣಿಟ್ಟಿದ್ದರೆ ಕಾಂಗ್ರೆಸ್ ಸದಸ್ಯ ಕೊನೆಕ್ಷಣದಲ್ಲಿ ಕೈಕೊಟ್ಟು ಬಿಜೆಪಿ ಗೆಲುವಿಗೆ ಕಾರಣರಾಗಿದ್ದಾರೆ.
(ಗಲ್ಫ್ ಕನ್ನಡಿಗ) ಹೌದು, ಇಂದು ಮೂಡಬಿದ್ರೆ ತಾ.ಪಂ ನ ಮೊದಲ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ. ಮಂಗಳೂರು ತಾ. ಪಂ ನಿಂದ ವಿಭಾಗಿಸಿ ಇತ್ತೀಚಿಗೆ ಮೂಡಬಿದ್ರೆ ತಾ.ಪಂ ರಚನೆಯಾಗಿತ್ತು. ಇದರಲ್ಲಿ ಎಂಟು ಸದಸ್ಯರಿದ್ದರು. ಬಿಜೆಪಿಯಿಂದ ನಾಲ್ಕು, ಕಾಂಗ್ರೆಸ್ ನಿಂದ ನಾಲ್ಕು ಸದಸ್ಯರು ಇದ್ದು ಸಮಬಲ ಇತ್ತು. ಆದರೆ ಕೊನೆಕ್ಷಣದಲ್ಲಿ ಕಾಂಗ್ರೆಸ್ ಸದಸ್ಯ ಸುಕುಮಾರ್ ಸನಿಲ್ ಗೈರು ಹಾಜರಾಗಿದ್ದಾರೆ. ಬಿಜೆಪಿ ನಾಲ್ಕು ಸದಸ್ಯರು ಮತ್ತು ಕಾಂಗ್ರೆಸ್ ನ ಮೂವರು ಸದಸ್ಯರು ಚುನಾವಣೆಯಲ್ಲಿ ಪಾಲ್ಗೊಂಡರು. ಕಾಂಗ್ರೆಸ್ ಸದಸ್ಯ ನ ಗೈರಿನಿಂದ ಬಿಜೆಪಿಯ ಸದಸ್ಯರು ಸುಲಭವಾಗಿ ಗೆದ್ದಿದ್ದಾರೆ.
(ಗಲ್ಫ್ ಕನ್ನಡಿಗ)ರೇಖಾಸಾಲ್ಯಾನ್ ಅಧ್ಯಕ್ಷರಾಗಿ ,ಸಂತೋಷ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಸದಸ್ಯ ಕೊನೆ ಕ್ಷಣದಲ್ಲಿ ಕೈಕೊಟ್ಟಿರುವುದರಿಂದ ಆಪರೇಷನ್ ಕಮಲಕ್ಕೆ ಸಿಲುಕಿರಬಹುದೆಂದು ಸಂಶಯಿಸಲಾಗಿದೆ.
(ಗಲ್ಫ್ ಕನ್ನಡಿಗ)