ಮೂಡಬಿದ್ರೆ ತಾ. ಪಂ ಚುನಾವಣೆಯಲ್ಲಿ ಕೈಕೊಟ್ಟ ಪ್ರಕರಣಕ್ಕೆ ಟ್ವಿಸ್ಟ್: ನಡೆಯಿತ ಕಿಡ್ನ್ಯಾಪ್?


(ಗಲ್ಪ್ ಕನ್ನಡಿಗ)ಮಂಗಳೂರು: ಮೂಡಬಿದ್ರೆ ತಾ. ಪಂ ಗೆ ನಿನ್ನೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಸದಸ್ಯ ಸುಕುಮಾರ್ ಸನಿಲ್ ಗೈರು ಹಾಜರಿ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.


ಗಲ್ಪ್ ಕನ್ನಡಿಗ ವಾಟ್ಸಪ್ ಗ್ರೂಪ್ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ


(ಗಲ್ಪ್ ಕನ್ನಡಿಗ)ನಿನ್ನೆ ಮೂಡಬಿದ್ರೆ ತಾ. ಪಂ ಚುನಾವಣೆಯಲ್ಲಿ ಕಾಂಗ್ರೆಸ್ ಸದಸ್ಯ ಸುಕುಮಾರ್ ಸನಿಲ್ ಹಾಜರಿರಬೇಕಿತ್ತು. ಎಂಟು ಸದಸ್ಯಬಲದ ತಾ.ಪಂ ನಲ್ಲಿ ನಾಲ್ಕು ಸ್ಥಾನ ಕಾಂಗ್ರೆಸ್, ನಾಲ್ಕು ಸ್ಥಾನ ಬಿಜೆಪಿ ಸದಸ್ಯರಿದ್ದರು. ಸಮಬಲದ ಹಿನ್ನೆಲೆಯಲ್ಲಿ ಚುನಾವಣೆ ಕುತೂಹಲ ಕೆರಳಿಸಿತ್ತು. ನಿನ್ನೆ ಮಧ್ಯಾಹ್ನ ಚುನಾವಣೆ ನಡೆಯುವ ವೇಳೆ ಕಾಂಗ್ರೆಸ್ ಸದಸ್ಯ ಸುಕುಮಾರ್ ಸನಿಲ್ ಗೈರು ಹಾಜರಾಗಿದ್ದರು. ಇವರ ಗೈರು ಹಾಜರಿಯಿಂದ ಬಿಜೆಪಿ ಅನಾಯಸವಾಗಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನವನ್ನು ಮುಡಿಗೇರಿಸಿತ್ತು.ಇದನ್ನು ಓದಿ ಮೂಡಬಿದ್ರೆ ತಾ.ಪಂ ಚುನಾವಣೆಯಲ್ಲಿ ಪಕ್ಷಕ್ಕೆ ಕೈಕೊಟ್ಟ ಕಾಂಗ್ರೆಸ್ ಸದಸ್ಯ! - ನಡೆಯಿತ ಆಪರೇಷನ್ ಕಮಲ


(ಗಲ್ಪ್ ಕನ್ನಡಿಗ)ಆದರೆ ರಾತ್ರಿ ವೇಳೆಗೆ ಗೈರಾದ ಕಾಂಗ್ರೆಸ್ ಸದಸ್ಯನ ಕಿಡ್ನ್ಯಾಪ್ ನಡೆದಿರುವ ಬಗ್ಗೆ ವರದಿಯಾಗಿದೆ. ಚುನಾವಣೆಯಲ್ಲಿ ಪಾಲ್ಗೊಳ್ಳಬಾರದೆಂಬ ನಿಟ್ಟಿನಲ್ಲಿ ಕಿಡ್ನ್ಯಾಪ್ ಮಾಡಿರುವ ಶಂಕೆ ವ್ಯಕ್ತವಾಗಿದೆ,. ನಿನ್ನೆ ಮಧ್ಯಾಹ್ನದ ವೇಳೆ ಸುಕುಮಾರ್ ಸನಿಲ್ ರನ್ನು ಚೂರಿ ತೋರಿಸಿದ ಗುಂಪೊಂದು ಕಿಡ್ನ್ಯಾಪ್ ಮಾಡಿಕೊಂಡು ಹೋಗಿ ಉಡುಪಿಯಲ್ಲಿ ಬಿಟ್ಟಿದೆ. ಅವರು ಉಡುಪಿಯಿಂದ ಮತ್ತೆ ಮೂಡಬಿದ್ರೆ ವಾಪಾಸು ಬಂದು ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಅಪಹರಣದ ದೂರು ನೀಡಿದ್ದಾರೆ. ಗುರುತು ಪರಿಚಯವಿಲ್ಲದ ವ್ಯಕ್ತಿಗಳು ಅಪಹರಿಸಿದ್ದಾರೆ ಎಂದು ದೂರು ನೀಡಿದ್ದಾರೆ.