-->

ಕೊರೊನಾ ಸೋಂಕಿತ ಐವನ್ ಡಿಸೋಜ ಗುಣಮುಖಕ್ಕೆ ಮಂಗಳಾದೇವಿ ದೇವಸ್ಥಾನದಲ್ಲಿ ಪ್ರಾರ್ಥನೆ

ಕೊರೊನಾ ಸೋಂಕಿತ ಐವನ್ ಡಿಸೋಜ ಗುಣಮುಖಕ್ಕೆ ಮಂಗಳಾದೇವಿ ದೇವಸ್ಥಾನದಲ್ಲಿ ಪ್ರಾರ್ಥನೆ


(ಗಲ್ಪ್ ಕನ್ನಡಿಗ)ಮಂಗಳೂರು: ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜರವರಿಗೆ ಹಾಗೂ ಅವರ ಪತ್ನಿ ಕವಿತಾ ಡಿಸೋಜರವರಿಗೆ ಕರೋನಾ ಪಾಸಿಟಿವ್ ಕಂಡುಬಂದಿರುವ ಹಿನ್ನೆಲೆಯಲ್ಲಿ ಐವನ್ ಡಿಸೋಜಾ ಅಭಿಮಾನಿ ಬಳಗ ಇಂದು ಮಹತೋಭಾರ ಮಂಗಳಾದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿತು.

ಗಲ್ಫ್ ಕನ್ನಡಿಗ ವಾಟ್ಸಪ್ ಗ್ರೂಪ್ ಜಾಯಿನ್ ಆಗಲು ಇಲ್ಲಿ ಕ್ಲಿಕ್ ✅ ಮಾಡಿ(ಗಲ್ಪ್ ಕನ್ನಡಿಗ)ಮಾಜಿ ಶಾಸಕರಾದ ಐವನ್ ಡಿಸೋಜಾ ರವರು ಹಾಗೂ ಕ್ವಾರಂಟ್ಟೈನ್ ನಲ್ಲಿರುವ ಪಕ್ಷದ ಏಲ್ಲಾಮುಖ್ಯ ನಾಯಕರುಗಳಿಗೆ ಶೀಘ್ರ ಗುಣಮುಖವಾಗಿ ಬರಲಿ ಎಂದು ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.


(ಗಲ್ಪ್ ಕನ್ನಡಿಗ) ಮಾಜಿ ಶಾಸಕರು ಸತತ 5 ತಿಂಗಳಿಂದ ಸಾರ್ವಜನಿಕರ ಸಂಪರ್ಕದೊಂದಿಗೆ ಅಕ್ಕಿ ವಿತರಣೆ, ಮಾಸ್ಕ್ ವಿತರಣೆ, ಹಾಲು ವಿತರಣೆ, ಸ್ಯಾನಿಟೈಸರ್ ವಿತರಣೆ, ಹಾಗೂ ಬಡಜನರ ಕಷ್ಟದಲ್ಲಿ ಸ್ಪಂದಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದು ಅವರು ಶೀಘ್ರ ಗುಣಮುಖರಾಗುವಂತೆ ಪ್ರಾರ್ಥಿಸಲಾಯಿತು.


(ಗಲ್ಪ್ ಕನ್ನಡಿಗ)ಈ ಸಂದರ್ಭದಲ್ಲಿ ಮಾಜಿ ಕಾರ್ಪೊರೇಟರ್ ಭಾಸ್ಕರರಾವ್ ನಾಗೇಂದ್ರಕುಮಾರ್, ಸ್ಯಾಕ್ಸೋಫೋನ್ ವಾದಕ ಡಾಕ್ಟರ್ ಮಚ್ಚೇಂದ್ರನಾಥ್ ದೇವಸ್ಥಾನದ ಟ್ರಸ್ಟಿಗಳಾದ ರಾಮ ನಾಯಕ್, ಸುಭಾಶ್ಚಂದ್ರಅಡಪ , ಸದಾಶಿವ ಅಮೀನ್ ಕಾಯ೯ಕತ೯ರಾದ ಶ್ರೀ ಮತಿ ವಿಕ್ಟೋರಿಯಾ, ಶ್ರೀಮತಿ ಆಶಾ ರಾಜೇಂದ್ರ ಶ್ರೀಮತಿ ವಿದ್ಯಾ ದಿನೇಶ್ ಪಾಂಡೇಶ್ವರ,ಸಂಜೀವ ಕೊಟ್ಯಾನ್, ಸದಾಶಿವ ಕುಲಾಲ್ ಮುಂತಾದವರು ಉಪಸ್ಥಿತರಿದ್ದರುAds on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99