
ಬೆಂಗಳೂರು ಗಲಭೆ ಪ್ರಕರಣ-SDPI ಯನ್ನು ನಿಷೇಧಿಸಿ ; ಗೃಹಸಚಿವರಿಗೆ ಮನವಿ ನೀಡಿದ ವಿಹಿಂಪ
Wednesday, August 12, 2020
(ಗಲ್ಫ್ ಕನ್ನಡಿಗ)ಮಂಗಳೂರು; ಬೆಂಗಳೂರಿನ ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿಯಲ್ಲಿ ನಡೆದ ಘಟನೆಯ ಹಿನ್ನೆಲೆಯಲ್ಲಿ SDPI ಸಂಘಟನೆ ಯನ್ನು ನಿಷೇಧಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ನೇತೃತ್ವದಲ್ಲಿ ಮಂಗಳೂರು ವಿಹಿಂಪ ದಿಂದ ಗೃಹ ಸಚಿವರಿಗೆ ಮನವಿ ನೀಡಲಾಯಿತು.
(ಗಲ್ಫ್ ಕನ್ನಡಿಗ)ಬೆಂಗಳೂರು ಗಲಭೆಯ ಹಿನ್ನೆಲೆಯಲ್ಲಿ ಘಟನೆಯ ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದ ವಿಹಿಂಪ ಮುಖಂಡರು ಈ ಘಟನೆ ಹಿಂದೆ ರಾಷ್ಟ್ರ ವಿದ್ರೋಹಿ ಸಂಘಟನೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಮತ್ತು ಭಯೋತ್ಪಾದಕ ರ ಕೈವಾಡವಿದೆ. ಈ ಕಾರಣದಿಂದ ಘಟನೆ ತನಿಖೆಯನ್ನು ಎನ್ ಐ ಎ ದಿಂದ ಮಾಡಬೇಕು ಎಂದು ಮನವಿ ಸಲ್ಲಿಸಿದರು.
(ಗಲ್ಫ್ ಕನ್ನಡಿಗ)