ಬೆಂಗಳೂರು ಗಲಭೆಗೆ ಸ್ಥಳೀಯ ಪೊಲೀಸರ ನಿರ್ಲಕ್ಷ್ಯವೇ ಕಾರಣ; SDPI ರಾಜ್ಯಾಧ್ಯಕ್ಷ ಆರೋಪ (Video)(ಗಲ್ಫ್ ಕನ್ನಡಿಗ)ಬೆಂಗಳೂರು; ಬೆಂಗಳೂರು ಗಲಭೆಗೆ ಸ್ಥಳೀಯ ಪೊಲೀಸರ ನಿರ್ಲಕ್ಷ್ಯ ವೆ ಕಾರಣ ಎಂದು SDPI ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಆರೋಪಿಸಿದ್ದಾರೆ.

(ಗಲ್ಫ್ ಕನ್ನಡಿಗ)ನವೀನ್ ಎಂಬಾತ ಪ್ರವಾದಿ ಹಾಗೂ ಇಸ್ಲಾಂ ಧರ್ಮದ ಬಗ್ಗೆ ಅವಹೇಳನ ಮಾಡಿದ್ದ.ಈ ಬಗ್ಗೆ ಸ್ಥಳೀಯ ಯುವಕರು ಪೊಲೀಸ್ ಠಾಣೆಗೆ ದೂರು ಕೊಟ್ಟರೂ ಪೊಲೀಸರು ನಿರ್ಲಕ್ಷ್ಯ ಮಾಡಿದರು. ಶಾಸಕ ಅಖಂಡ ಶ್ರೀನಿವಾಸ್ ರ ಸೋದರ ಅಳಿಯನಾಗಿರುವ ನವೀನ್ ವಿರುದ್ದ ಪೊಲೀಸರು ಕ್ರಮ ಕೈಗೊಂಡಿಲ್ಲ.ಮೊದಲೇ ಆಕ್ರೋಶದಿಂದ ಇದ್ದ ಜನ ಪೊಲೀಸರ ನಿರ್ಲಕ್ಷ್ಯದಿಂದ ರೊಚ್ಚಿಗೆದ್ದಿದ್ದಾರೆ.ಈ ಅಹಿತಕರ ಘಟನೆಗೆ ಹಾಗೂ ಮೂರು ಜೀವ ಬಲಿಯಾಗಲು ಪೊಲೀಸರ ನಿರ್ಲಕ್ಷ್ಯ ಕಾರಣ.ನವೀನ್ ಎಂಬಾತನ ಕೋಮು ಪ್ರಚೋದನಾ ಪೋಸ್ಟ್ ಘಟನೆಗೆ ಕಾರಣವಾಗಿದೆ. ಎಸ್ ಡಿ ಪಿ ಐ  ಮುಖಂಡರು ಪೊಲೀಸರ ಜೊತೆ ಸೇರಿ ಜನರನ್ನು ಸಮಾಧಾನಪಡಿಸಿದ್ದಾರೆ. ಗಲಭೆ ನಿಯಂತ್ರಿಸಲು ಬಂದ ಮುಝಮಿಲ್ ಪಾಷರನ್ನು ಬಂಧಿಸಿದ್ದಾರೆ.ಇದು ಪೊಲೀಸರ ಹಾಗೂ ಸರ್ಕಾರದ ವೈಫಲ್ಯವನ್ನು ಮರೆಮಾಚಲು ಯತ್ನ.ಮಾಮೂಲಿಯಂತೆ SDPIಯನ್ನು ಗಲಭೆಗೆ ಎಳೆದು ತರುವ ಪ್ರಯತ್ನ ನಡೆದಿದೆ.ಜನರು ಯಾರೂ ಅಪಪ್ರಚಾರವನ್ನು ಗಣನೆಗೆ ತೆಗೆಯಬಾರದು.SDPI ಯಾವುತ್ತೂ ನ್ಯಾಯ,ನೀತಿ,ಅಭಿವೃದ್ಧಿ ಪರ ಇರುತ್ತದೆ ಎಂದು ಹೇಳಿದ್ದಾರೆ.

(ಗಲ್ಫ್ ಕನ್ನಡಿಗ)