-->

ಕಂಕನಾಡಿ ನಗರ ಪೊಲೀಸ್ ಠಾಣೆಯ ನೂತನ ಕಟ್ಟಡಕ್ಕೆ ಹೆಚ್ಚುವರಿ ಅನುದಾನ ಬಿಡುಗಡೆಗೊಳಿಸುವಂತೆ  ಗೃಹ ಸಚಿವರಿಗೆ ಮನವಿ ನೀಡಿದ ಶಾಸಕ ಕಾಮತ್

ಕಂಕನಾಡಿ ನಗರ ಪೊಲೀಸ್ ಠಾಣೆಯ ನೂತನ ಕಟ್ಟಡಕ್ಕೆ ಹೆಚ್ಚುವರಿ ಅನುದಾನ ಬಿಡುಗಡೆಗೊಳಿಸುವಂತೆ ಗೃಹ ಸಚಿವರಿಗೆ ಮನವಿ ನೀಡಿದ ಶಾಸಕ ಕಾಮತ್


(ಗಲ್ಫ್ ಕನ್ನಡಿಗ)ಕಂಕನಾಡಿ ನಗರ ಪೋಲಿಸ್ ಠಾಣೆಯ ಕಟ್ಟಡ ನಿರ್ಮಾಣ ಕಾಮಗಾರಿಗೆ ಹೆಚ್ಚುವರಿ ಅನುದಾನ ಒದಗಿಸುವಂತೆ ಶಾಸಕ ವೇದವ್ಯಾಸ್ ಕಾಮತ್ ಅವರು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

(ಗಲ್ಫ್ ಕನ್ನಡಿಗ)ಮಂಗಳೂರಿಗೆ ಆಗಮಿಸಿದ್ದ ಗೃಹ ಸಚಿವರನ್ನು ಭೇಟಿ ಮಾಡಿದ ಶಾಸಕ ಕಾಮತ್, ಈಗಾಗಲೇ ಕಂಕನಾಡಿ ನಗರ ಪೊಲೀಸ್ ಠಾಣೆಯು ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ.ಕಟ್ಟಡ ತೀರ ಹಳೆಯದಾಗಿರುವ ಕಾರಣ ಸೋರುತ್ತಿದ್ದು ದಾಖಲೆಗಳನ್ನು ಸಂರಕ್ಷಿಸುವುದೂ ಕಷ್ಟಕರವಾಗಿದೆ. ಸ್ಥಳಾವಕಾಶದ ಕೊರತೆಯಿಂದ ಸಾರ್ವಜನಿಕರಿಗೆ ಹಾಗೂ  ಸಿಬ್ಬಂದಿಗಳಿಗೆ ವಾಹನ ನಿಲುಗಡೆ ಸಮಸ್ಯೆಯೂ ಇದೆ. 

(ಗಲ್ಫ್ ಕನ್ನಡಿಗ)ಪ್ರಸ್ತುತ ಪೊಲೀಸ್ ಇಲಾಖೆಗೆ ಸೇರಿದ ವಸತಿ ಗೃಹದ ಪಕ್ಕದಲ್ಲಿ ನೂತನ ಠಾಣೆಯನ್ನು ನಿರ್ಮಿಸಲು ಇಲಾಖೆಯಿಂದ 10 ಲಕ್ಷ ರೂಪಾಯಿ ಮಂಜೂರುಗೊಳಿಸಿ, ನಿರ್ಮಿತಿ ಕೇಂದ್ರ ಮಂಗಳೂರು ಇದರಿಂದ ಹೊಸ ಠಾಣೆಗೆ 2 ಅಂತಸ್ಥಿನ ಕಟ್ಟಡ ನಿರ್ಮಿಸಲಾಗಿದೆ. ಆ ನಂತರ ಅನುದಾನದ ಕೊರತೆಯಿಂದ ಕಾಮಗಾರಿ ಅರ್ದದಲ್ಲೇ ನಿಂತಿದ್ದು ಕಟ್ಟಡ ಪೂರ್ಣಗೊಳಿಸಲು ಹೆಚ್ಚುವರಿ 25 ಲಕ್ಷ ರೂಪಾಯಿಗಳ ಅವಶ್ಯಕತೆಯಿದೆ. ಹಾಗಾಗಿ ಪ್ರಥಮ ಆದ್ಯತೆಯ ಮೇರೆಗೆ ಅನುದಾನ ಬಿಡುಗಡೆಗೊಳಿಸಬೇಕೆಂದು ಶಾಸಕ ಕಾಮತ್ ಗೃಹ ಸಚಿವರಿಗೆ ಲಿಖಿತ ಮನವಿ ಸಲ್ಲಿಸಿದರು.

(ಗಲ್ಫ್ ಕನ್ನಡಿಗ)ಈ ಸಂದರ್ಭ ಮಂಗಳೂರು ಉತ್ತರ ಶಾಸಕ ಡಾ.ವೈ ಭರತ್ ಶೆಟ್ಟಿ, ಬಿಜೆಪಿ ಮುಖಂಡ ಜಗದೀಶ್ ಶೇಣವ ಮತ್ತಿತರರು ಉಪಸ್ಥಿತರಿದ್ದರು.
(ಗಲ್ಫ್ ಕನ್ನಡಿಗ)

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99