
ಬೆಂಗಳೂರು ಗಲಭೆಗೆ ಕಾರಣನಾದ ನವೀನ್ ಬಿಜೆಪಿ ಮತದಾರ; ಸಾಕ್ಷ್ಯ ತೋರಿಸಿದ ಡಿ ಕೆ ಶಿವಕುಮಾರ್
Wednesday, August 12, 2020
(ಗಲ್ಫ್ ಕನ್ನಡಿಗ)ಬೆಂಗಳೂರು: ಬೆಂಗಳೂರು ಗಲಭೆಗೆ ಕಾರಣನಾದ ನವೀನ್ ಬಿಜೆಪಿ ಮತದಾರ. ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿದ್ದೇನೆ ಅಂತ ಫೇಸ್‍ಬುಕ್‍ನಲ್ಲಿ ಹೇಳಿಕೊಂಡಿದ್ದ. ಹೀಗಾಗಿ ನವೀನ್ ಸಂಪರ್ಕ ಬಿಜೆಪಿ ಜೊತೆಯಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆಪಾದಿಸಿದ್ದಾರೆ.
(ಗಲ್ಫ್ ಕನ್ನಡಿಗ)ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನವೀನ್ ಫೇಸ್‍ಬುಕ್ ಪೋಸ್ಟನ್ನು ಪ್ರದರ್ಶಿಸಿ ಈ ಆಪಾದನೆ ಮಾಡಿದರು.
(ಗಲ್ಫ್ ಕನ್ನಡಿಗ)ಬಿಜೆಪಿ ಈ ವಿಚಾರದಲ್ಲಿ ಪ್ರತಿಹಂತದಲ್ಲೂ ಹೇಳಿಕೆಯನ್ನು ಕೊಡುತ್ತಿದೆ. ಈ ಮೂಲಕ ಪ್ರಚೋದನೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
(ಗಲ್ಫ್ ಕನ್ನಡಿಗ)ಫೇಸ್‍ಬುಕ್‍ನಲ್ಲಿ ಅವಹೇಳಕಾರಿ ಪೋಸ್ಟ್ ಮಾಡಿದ ತಕ್ಷಣ ದೂರು ನೀಡಿದ್ದಾರೆ. ಆಗ ಪೊಲೀಸರು ವಿಳಂಬ ಮಾಡದೆ ಕ್ರಮ ಕೈಗೊಂಡಿದ್ದರೆ ಈ ಅನಾಹುತ ಆಗುತ್ತಿರಲಿಲ್ಲ. ಯಾರು ಏನೇ ಮಾಡಿದ್ದರೂ ತಪ್ಪು, ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿದವರದ್ದು ತಪ್ಪು ಇದೆ. ಮನೆಗೆ ಬೆಂಕಿ ಹಚ್ಚಿದವರದ್ದು ತಪ್ಪು ಇದೆ. ನಾವು ಯಾರ ಬೆಂಬಲಕ್ಕೂ ಇಲ್ಲ ಎಂದು ಹೇಳಿದರು.
(ಗಲ್ಫ್ ಕನ್ನಡಿಗ)ಶಾಸಕರ ಜೊತೆ ನಾನು ಮಂಗಳವಾರ ರಾತ್ರಿ 9 ಗಂಟೆಯವರೆಗೂ ಇದ್ದೆವು. ಅವರೇನಾದರೂ ಬೇರೆ ಕಡೆ ಶಿಫ್ಟ್ ಆಗಿಲ್ಲ ಎಂದರೆ ಅವರ ಪ್ರಾಣಕ್ಕೆ ಅಪಾಯವಿತ್ತು. ನಮ್ಮ ಇಬ್ಬರು ಶಾಸಕರು ಅವರ ಜೊತೆ ಹೋಗಿದ್ದಾರೆ. ನಾನು ಕೂಡ ಸಂಪರ್ಕದಲ್ಲಿದ್ದೇನೆ. ರಾತ್ರಿನೂ ಮಾತನಾಡಿದ್ದೇನೆ ಎಂದರು.
(ಗಲ್ಫ್ ಕನ್ನಡಿಗ)ಠಾಣೆಗೆ ಬೆಂಕಿ ಹಚ್ಚಿರುವುದು ಅಮಾನವೀಯ ಘಟನೆ,ಇದನ್ನು ಯಾರು ಮಾಡಿದರೂ ಖಂಡಿಸುತ್ತೇವೆ. ಕಾನೂನನ್ನ ಯಾರೂ ಕೂಡ ಕೈಗೆ ತೆಗೆದುಕೊಳ್ಳಬಾರದು. ಈ ರೀತಿ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು
(ಗಲ್ಫ್ ಕನ್ನಡಿಗ)ಕೆಜಿ ಹಳ್ಳಿಯಲ್ಲಿ ನಡೆದ ಘಟನೆ ಹಿಂದೆ ಸಂಚು ಇದ್ದು ಘಟನೆ ಬಗ್ಗೆ ಪರಿಶೀಲನೆಗೆ ಕಾಂಗ್ರೆಸ್ ನಾಯಕರ ತಂಡ ಹೋಗಲಿದೆ. ಮುಖ್ಯಮಂತ್ರಿಗಳ ಹೇಳಿಕೆಯನ್ನು ಸ್ವಾಗತಿಸುತ್ತೇನೆ. ಆದರೆ ಪ್ರಚೋದನಕಾರಿ ಹೇಳಿಕೆ ಕೊಡುತ್ತಿರುವ ಬಿಜೆಪಿ ಮುಖಂಡರನ್ನು ಅವರು ತಡೆಯಬೇಕು ಎಂದು ಆಗ್ರಹಿಸಿದರು.
(ಗಲ್ಫ್ ಕನ್ನಡಿಗ)