ದಲಿತ ಶಾಸಕನ ಮೇಲೆ ಮತಾಂಧರ ಹಲ್ಲೆ, ಗೋಲಿಬಾರ್ ಸರಿಯಾದ ಕ್ರಮ: ಡಾ.ಭರತ್ ಶೆಟ್ಟಿ

 
(ಗಲ್ಫ್ ಕನ್ನಡಿಗ) ಸುರತ್ಕಲ್: ಬೆಂಗಳೂರಿನ ಕೆ.ಜಿ ಹಳ್ಳಿ, ಡಿ.ಜೆ ಹಳ್ಳಿಯಲ್ಲಿ ಗಲಭೆ ಎಬ್ಬಿಸಿದ ದುಷ್ಕರ್ಮಿಗಳ ಹಿಂದೆ ಮತಾಂಧ ಉಗ್ರಗಾಮಿ ಗುಂಪುಗಳ ಕೈವಾಡದ ಶಂಕೆಯಿದ್ದು ಮಾರಕಾಯುಧಗಳೊಂದಿಗೆ ಬಂದವರ ಮೇಲೆ  ಗೋಲಿಬಾರ್ ಮಾಡಿ ಹುಟ್ಟಡಗಿಸುವುದೊಂದೇ ದಾರಿ. ಪೊಲೀಸ್ ಇಲಾಖೆ ಗಲಭೆ ಆರಂಭವಾಗುವ ಹಂತದಲ್ಲೇ ಹಿಂಸಾ ಪ್ರವೃತ್ತಿಯ ಅನಾಗರಿಕರ ಮೇಲೆ ಗೋಲಿಬಾರ್ ಮಾಡಿದ್ದರೆ ಇತರರಿಗೆ ಪಾಠವಾಗುತ್ತಿತ್ತು ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಹೇಳಿದ್ದಾರೆ.


(ಗಲ್ಫ್ ಕನ್ನಡಿಗ)ಮತಾಂಧರು ಮಹಿಳೆ ಪೇದೆಗಳೂ ಎಂದು ನೋಡದೆ ಹಲ್ಲೆ ಮಾಡಿದ್ದಾರೆ.ಬೆಂಕಿ ಹಚ್ಚಿ ಸಾಯಿಸಲು ಮುಂದಾಗಿದ್ದರು. ದಲಿತ ಹಿಂದೂ ಶಾಸಕನ ಮನೆ,ಆಸ್ತಿ ಹಾನಿ ಮಾಡಿದ್ದಾರೆ.ಇಂತಹವರ ವಿರುದ್ದ ಕ್ಷಮೆಯಿಲ್ಲದ ಕಠಿಣ ಕಾರ್ಯಾಚರಣೆ ಅಗತ್ಯ. ಈ ಗಲಭೆ ಹಿಂದೆ ಯಾರ ಕುಮ್ಮಕ್ಕು ಇದೆ ಎಂಬುದರ ಬಗ್ಗೆ ಸರಿಯಾದ ತನಿಖೆ ನಡೆಯಬೇಕಿದೆ. ಮತಾಂಧರನ್ನು ಗುರುತಿಸಿ ಅವರಿಂದ ಆಸ್ತಿ ನಷ್ಟದ ಪರಿಹಾರ ವಶಕ್ಕೆ ಪಡೆಯಬೇಕು.ಇದರ ಜತೆ ಹಿಂದೂಗಳ ಆರಾಧ್ಯ ದೇವನಾದ ಶ್ರೀಕೃಷ್ಣನನ್ನು ಅತ್ಯಾಚಾರಿ ಎಂದು ಬಿಂಬಿಸಿದ್ದು  ಎಷ್ಟು ಸರಿ ಇದೆಲ್ಲದ ಮೇಲೆ ಕೂಲಂಕುಷ ತನಿಖೆಯಾಗಬೇಕಿದೆ.ಕಾನೂನು, ಪೊಲೀಸ್ ಇಲಾಖೆ ಇರುವಾಗ ತಪ್ಪಿತಸ್ಥರ ವಿರುದ್ದ ದೂರು ನೀಡಿ ಒತ್ತಾಯಿಸುವ ಬದಲು ಏಕಾ ಏಕಿ ಗುಂಪು ಸೇರಿ ಶಾಸಕರ ಮನೆ ಮೇಲೆ,  ಇದೀಗ ಕೊರೊನಾ ವೈರಸ್ ವಿರುದ್ದ ಸೆಣೆಸುತ್ತಾ ಸರ್ವರ ಮೆಚ್ಚುಗೆಗೆ ಪಾತ್ರವಾಗುತ್ತಿರುವ  ಕಾನೂನು ವಾರಿಯರ್ಸ್ ಆದ ಪೊಲೀಸರ ಮೇಲೆ, ಇಲಾಖೆಯ ವಾಹನಗಳ ಮೇಲೆ ಬೆಂಕಿ ಹಚ್ಚಿ  ಮತಾಂಧರು ದೌರ್ಜನ್ಯ ಎಸಗುವುದನ್ನು ಯಾವುದೇ ಕಾರಣಕ್ಕೂ ಸಹಿಸಲಾಗದು ಎಂದಿದ್ದಾರೆ.

(ಗಲ್ಫ್ ಕನ್ನಡಿಗ)ಮಾಜಿ ಸಚಿವ ಯು.ಟಿ ಖಾದರ್ ಎಸ್ಡಿಪಿಐ ಬಿಜೆಪಿಯ ರಾಜಕೀಯ ದಾಳ ಎಂದಿದ್ದಾರೆ.ಆದರೆ ದಲಿತ ಶಾಸಕನನ್ನು ನಿಂದಿಸಿ ಅವರ ಮೇಲೆ ಹಲ್ಲೆಯಾದರೂ ಕಾಂಗ್ರೆಸ್ ಮೌನ ಏಕೆ? .ಯು.ಟಿ ಖಾದರ್ ಮೊದಲು ಮತಾಂಧರ ಶಕ್ತಿಗಳ ವಿರುದ್ದ ಕ್ರಮಕ್ಕೆ ಆಗ್ರಹಿಸಲಿ ಎಂದು ತಿರುಗೇಟು ನೀಡಿದ್ದಾರೆ.

(ಗಲ್ಫ್ ಕನ್ನಡಿಗ)