ಜಿಲ್ಲಾ ಪಂಚಾಯತ್ ನಲ್ಲಿ ಉದ್ಯೋಗವಿದೆ- ಅರ್ಜಿ ಸಲ್ಲಿಸಲು ಕೊನೆಯ ದಿನ ಆಗಷ್ಟ್ 31
Wednesday, August 12, 2020
(ಗಲ್ಪ್ ಕನ್ನಡಿಗ)ಮಂಗಳೂರು:-ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಇ-ಪಂಚಾಯತ್ ಯೋಜನೆಯಡಿ ಸಹಾಯಕ ಜಿಲ್ಲಾ ಯೋಜನಾ ವ್ಯವಸ್ಥಾಪಕ ಹುದ್ದೆಗೆ ಆನ್ ಲೈನ್ ಮೂಲಕ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ.
ಹುದ್ದೆಯ ವಿವರ ಇಂತಿವೆ: ಹುದ್ದೆಯ ಹೆಸರು-ಸಹಾಯಕ ಜಿಲ್ಲಾ ಯೋಜನಾ ವ್ಯವಸ್ಥಾಪಕರು (ಎ.ಡಿ.ಪಿ.ಎಮ್.) ಅರ್ಹತೆ -ಬಿ.ಇ. (ಸಿ.ಎಸ್/ಇ. ಮತ್ತು ಸಿ/ಐ.ಎಸ್)/ ಎಮ್.ಸಿ.ಎ/ಬಿ.ಸಿಎ, ಮಾಸಿಕ ವೇತನ ರೂ 25,000 (ಸೇವಾ ಶುಲ್ಕ+ಸೇವಾ ತೆರಿಗೆ ಪ್ರತ್ಯೇಕ), ಖಾಲಿ ಹುದ್ದೆಗಳ ಸಂಖ್ಯೆ-1.
ದ.ಕ. ಜಿಲ್ಲಾ ಪಂಚಾಯತ್ ವೆಬ್‍ಸೈಟ್ zpdk.kar.nic.in ನಲ್ಲಿ ಅರ್ಜಿ ಸಲ್ಲಿಸಬಹುದು. ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನ ಎಂದು ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಟಣೆ ತಿಳಿಸಿದೆ.
(ಗಲ್ಪ್ ಕನ್ನಡಿಗ)