ಗದ್ದಲ, ಕೋಲಾಹದಲ್ಲಿ ಸಿಡಬ್ಲ್ಯುಸಿ ಸಭೆ: ರಾಹುಲ್ ಬೆನ್ನಿಗೆ ನಿಂತ ಗುಳಿಕೆನ್ನೆ ಹುಡುಗಿ ರಮ್ಯಾಹೊಸದಿಲ್ಲಿ: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಹೊಸ ಮುಖದ ಆಯ್ಕೆಗಾಗಿ ನಡೆದ ಮಹತ್ವದ ಕಾರ್ಯಕಾರಣಿ ಸಭೆಯಲ್ಲಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮೇಲೆ ಅಸಮಾಧಾನ ಸ್ಫೋಟವಾಗಿದೆ. ನಾಯಕತ್ವದ ಕುರಿತಾಗಿ ಪಕ್ಷದ 23 ಹಿರಿಯ ನಾಯಕರು ಸೋನಿಯಾ ಗಾಂಧಿಗೆ ಬರೆದಿರುವ ಪತ್ರದ ಕುರಿತಾಗಿ ರಾಹುಲ್ ಗಾಂಧಿ ತಮ್ಮ ಕೋಪವನ್ನು ಹೊರಹಾಕಿದ್ದಾರೆ.

ಗಲ್ಫ್ ಕನ್ನಡಿಗ ವಾಟ್ಸಪ್ ಗ್ರೂಪ್ ಸೇರಲು ಇಲ ಕ್ಲಿಕ್ ಮಾಡಿ


ಪಕ್ಷದ ಹಿರಿಯ ನಾಯಕರು ಪತ್ರ ಬರೆದಿದ್ದೇಕೆ? ಬರೆದಿದ್ದರೂ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು ಯಾಕೆ? ಬಿಜೆಪಿಯೊಂದಿಗೆ ಒಪ್ಪಂದ ಮಾಡಿಕೊಂಡು ಕಾಂಗ್ರೆಸ್ ನಾಯಕರು ಪತ್ರ ಬರೆದಿದ್ದಾರೆ ಎಂದು ರಾಹುಲ್ ಗಾಂಧಿ ಸಭೆಯಲ್ಲಿ ಆರೋಪಿಸಿದ್ದಾರೆ ಎನ್ನಲಾಗಿದೆ.


ರಾಹುಲ್ ಆರೋಪಕ್ಕೆ ಗುಲಾಬ್ ನಬೀ ಆಜಾದ್, ಕಪಿಲ್ ಸಿಬಲ್ ಮುಂತಾದ ಕಾಂಗ್ರೆಸ್ ಹಿರಿಯ ನಾಯಕರು ಕೆಂಡಾಮಂಡಲರಾದರು. ಆರೋಪ ಸಾಬೀತಾದರೆ ತಾವು ಪಕ್ಷಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಗುಲಾಬ್ ನಬೀ ಆಜಾದ್ ಸವಾಲು ಮೂಲಕ ತಮ್ಮ ಬೇಸರವನ್ನು ಹೊರಹಾಕಿದರು.


ರಾಹುಲ್ ಬೆನ್ನಿಗೆ ನಿಂತ ಮಾಜಿ ಸಂಸದೆ ರಮ್ಯಾ


ಇಷ್ಟೆಲ್ಲಾ ಚರ್ಚೆ, ಸುದ್ದಿಗಳ ನಡುವೆ ದಿವ್ಯ ಸ್ಪಂದನ ರಮ್ಯಾ ಟ್ವೀಟ್ ಮಾಡಿದ್ದು, ಅವರುಗಳು ಕೇವಲ ಪತ್ರವನ್ನು ಮಾತ್ರ ಮಾಧ್ಯಮಗಳಿಗೆ ಲೀಕ್ ಮಾಡಿದ್ದಲ್ಲಾ, ಸಭೆಯಲ್ಲಿ ಚರ್ಚೆಯಾಗುತ್ತಿರುವ ಕ್ಷಣ ಕ್ಷಣದ ವಿಚಾರ/ ಸಂಭಾಷಣೆಯನ್ನೂ ಅವರು ಮಾಧ್ಯಮಗಳಿಗೆ ನೀಡುತ್ತಿದ್ದಾರೆ. ಅದ್ಭುತ ಎಂದು ಹೇಳಿದ್ದಾರೆ. ಈ ಮೂಲ೧ಕ ರಾಹುಲ್ ಮೇಲೆ ಅಸಮಧಾನಗೊಂಡಿರುವ ಕೈ ಹಿರಿಯರ ವಿರುದ್ಧ ರಮ್ಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.