ಮುಂಡಗೋಡ ಮೌಲಾನ ಆಜಾದ್ ಶಾಲೆಯ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ

ಮುಂಡಗೋಡ : ಕಾರ್ಮಿಕ ಮತ್ತು ಸಕ್ಕರೆ ಸಚಿವ ಶಿವರಾಮ ಹೆಬ್ಬಾರ್ ಇಂದು ಸುಮಾರು 31.80 ಲಕ್ಷ ರೂಪಾಯಿ ವೆಚ್ಚದಲ್ಲಿ  ತಾಲೂಕಿನ ಶಾಸಕರ ಸರಕಾರಿ ಮಾದರಿ ಶಾಲೆಯ ನೂತನ ಕೊಠಡಿ ನಿರ್ಮಾಣ ಕಾಮಗಾರಿಗೆ ಹಾಗೂ ಸುಮಾರು 2.35 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಮೌಲಾನ ಆಜಾದ್ ಶಾಲೆಯ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಪಂಚಾಯತ ಸದಸ್ಯರಾದ ಶ್ರೀ ಎಲ್.ಟಿ.ಪಾಟೀಲ್ ಹಾಗೂ ಬಿಜೆಪಿ ತಾಲೂಕಾಧ್ಯಕ್ಷರಾದ ಶ್ರೀ ನಾಗಭೂಷಣ ಹಾವಣಗಿ, ಸ್ಥಳೀಯ ಪ್ರಮುಖರು, ಸಾರ್ವಜನಿಕರು ಹಾಜರಿದ್ದರು.