-->
ads hereindex.jpg
ಉ.ಕ ಜಿಲ್ಲೆಯ ಮಲ್ಲಾಪುರದಲ್ಲಿ  ಗೋವಾ ರಾಜ್ಯದ ಮದ್ಯ ಅಕ್ರಮ ದಾಸ್ತಾನು : ಅಬಕಾರಿ ದಾಳಿ

ಉ.ಕ ಜಿಲ್ಲೆಯ ಮಲ್ಲಾಪುರದಲ್ಲಿ ಗೋವಾ ರಾಜ್ಯದ ಮದ್ಯ ಅಕ್ರಮ ದಾಸ್ತಾನು : ಅಬಕಾರಿ ದಾಳಿ


ಕಾರವಾರ : ತಾಲೂಕಿನ ಮಲ್ಲಾಪೂರ ಗ್ರಾಮ ಲಕ್ಷ್ಮೀ ನಗರದಲ್ಲಿರುವ ಪಣೀಕರ ಎಂಬುವವರ ಮಾಲಿಕತ್ವದಲ್ಲಿದ್ದ ತಗಡಿನ ಶೆಡ್ಡಿನಲ್ಲಿ ಅಬಕಾರಿ ತಂಡವು ಇತ್ತಿಚಿಗೆ ದಾಳಿ ನಡೆಸಿ, ಗೋವಾ ರಾಜ್ಯದ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡಲು ದಾಸ್ತಾನಿಸಿಟ್ಟಿರುವುದನ್ನು ಜಪ್ತು ಪಡಿಸಿಕೊಂಡಿದೆ.  ಅಂದಾಜು 85,302 ಮೌಲ್ಯದ  183.960 ಲೀಟರ್  ಗೋವಾ ಮದ್ಯ ಹಾಗೂ 99.000 ಲೀಟರ್ ಗೋವಾ ಫೆನ್ನಿಯನ್ನು ವಶಪಡಿಸಿಕೊಂಡಿರುತ್ತದೆ.   ಅದೇ ರೀತಿ ಅಮದ್ದಳ್ಳಿ  ಗ್ರಾಮ ಗಾಂವಕ್ಕರವಾಡದ ವಿಷ್ಣು ಅನಂತ ತಳೆಕರ ಇವರ ಮನೆಯ ಹಿಂದುಗಡೆ ಇರುವ ಶೆಡ್ಡಿನಲ್ಲಿ ದಾಳಿ ನಡೆಸಿ ಅಂದಾಜು 90,300 ಮೌಲ್ಯದ 203.400 ಲೀಟರ್ ಗೋವಾ ಮದ್ಯ  40.000 ಲೀಟರ್ ಗೋವಾ ಬಿಯರ್‍ನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿತರು  ತಲೆಮರಿಸಿಕೊಂಡಿರುತ್ತಾರೆ.


ಈ ಬಗ್ಗೆ ಕಾರವಾರ ವಲಯದ ಅಬಕಾರಿ ನಿರೀಕ್ಷಕರು ಈ ಎರಡೂ ಪ್ರಕರಣಗಳನ್ನು ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ. ದಾಳಿ ಸಂದರ್ಭದಲ್ಲಿ ಅಬಕಾರಿ ನಿರೀಕ್ಷಕರಾದ ಗಣೇಶ ನಾಯ್ಕ ಅಧಿನ ಸಿಂಬ್ಬಂದಿಗಳಾದ ಪ್ರವೀಣ ಕುಮಾರ ಕಲ್ಲೋಳಿ,  ಶಿವಾನಂದ ಕೋರಡ್ಡಿ, ನಾಗರಾಜ ಹೂವಿನಾಳ, ವಿರೇಶ ಕುರಿ, ವಾಹನ ಚಾಲಕರಾದ ರವಿಚಂದ್ರ ನಾಯ್ಕ ಇದ್ದರು.

Ads on article

Advertise in articles 1

advertising articles 2