-->
ಶಿಕ್ಷಕರ ದಿನಾಚರಣೆಗೆ ನಿಮ್ಮ ಮೆಚ್ಚಿನ ಶಿಕ್ಷಕರಿಗೆ ಗುರುಕಾಣಿಕೆ ನೀಡಬೇಕ? - ಅಂಚೆ ಇಲಾಖೆಯ ಈ ಸೇವೆ ನೋಡಿ

ಶಿಕ್ಷಕರ ದಿನಾಚರಣೆಗೆ ನಿಮ್ಮ ಮೆಚ್ಚಿನ ಶಿಕ್ಷಕರಿಗೆ ಗುರುಕಾಣಿಕೆ ನೀಡಬೇಕ? - ಅಂಚೆ ಇಲಾಖೆಯ ಈ ಸೇವೆ ನೋಡಿ


(ಗಲ್ಫ್ ಕನ್ನಡಿಗ)ಸೆಪ್ಟೆಂಬರ್ 5 ರಂದು ದೇಶಾದ್ಯಂತ ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತಿದೆ. ಈಗ ಕಲಿಯುತ್ತಿರುವ ವಿದ್ಯಾರ್ಥಿಗಳು, ಹಳೆ ಶಿಕ್ಷಕರನ್ನು ಗೌರವಿಸುವ ಹಳೆ ಶಿಷ್ಯಂದರಿಗೆ ಈ ಬಾರಿ ಕೊರೊನಾ ಅಡ್ಡಿಯಾಗಿದೆ. ಈ ಸಂದರ್ಭದಲ್ಲಿ ಭಾರತೀಯ ಅಂಚೆ ಇಲಾಖೆ ವಿನೂತನ ಸೇವೆಯೊಂದನ್ನು ಆರಂಭಿಸಿದೆ.

(ಗಲ್ಫ್ ಕನ್ನಡಿಗ)ನೀವು ಮೆಚ್ಚಿದ ಶಿಕ್ಷಕರಿಗೆ ಗುರು ಕಾಣಿಕೆ ನೀಡಬೇಕಾದರೆ ಭಾರತೀಯ ಅಂಚೆ ಇಲಾಖೆಯ ಮೂಲಕ ಆನ್ ಲೈನ್ ನಲ್ಲಿಯೆ ಗುರುಕಾಣಿಕೆ ಸಲ್ಲಿಸಬಹುದಾಗಿದೆ. ನೀವು ಪ್ರಪಂಚದ ಯಾವುದೇ ಭಾಗದಲ್ಲಿ ಇದ್ದರೂ ಭಾರತದ ಯಾವುದೇ ಭಾಗದಲ್ಲಿ ಇರುವ ಶಿಕ್ಷಕರಿಗೆ ಗುರು ಕಾಣಿಕೆ ಸಲ್ಲಿಸಬಹುದಾಗಿದೆ.

ಖಾದಿ ಮಾಸ್ಕ್, ತರಕಾರಿ ಬೀಜ ಅಡಗಿದ ಪೆನ್ಸಿಲ್ , ಪಕ್ಷಿಗಳ ಬಗ್ಗೆ  ಇರುವ ಬುಕ್ ಮಾರ್ಕ್ ಗಿಪ್ಟ್

(ಗಲ್ಫ್ ಕನ್ನಡಿಗ)ಅಂಚೆ ಇಲಾಖೆ ಮುಖಾಂತರ ನಿಮ್ಮಿಷ್ಟದ ಗುರುಗಳಿಗೆ ಖಾದಿ ಮಾಸ್ಕ್, ತರಕಾರಿ ಬೀಜ ಅಡಗಿದ ಪೆನ್ಸಿಲ್ , ಪಕ್ಷಿಗಳ ಬಗ್ಗೆ  ಇರುವ ಬುಕ್ ಮಾರ್ಕ್ ಗಿಪ್ಟ್ ನೀಡಬಹುದಾಗಿದೆ.

ಏನು ಮಾಡಬೇಕು?

(ಗಲ್ಫ್ ಕನ್ನಡಿಗ)ನೀವು https://karnatakapost.gov.in/Guru_Vandana/Register.aspx ಈ ವೆಬ್ಸೈಟ್ ಕ್ಲಿಕ್ ಮಾಡಿದರೆ ಮಾಹಿತಿ ಸಿಗಲಿದೆ.
ಇದರಲ್ಲಿ 100 ರೂ ಹಣ ಪಾವತಿ ಮಾಡುವ ಬಗ್ಗೆ ಮಾಹಿತಿ ನೀಡಿದ್ದು  ಹಣ ಪಾವತಿಸಿ ಗಿಪ್ಟ್ ಆಯ್ಕೆ ಮಾಡಬಹುದಾಗಿದೆ. ಅದರ ಬಳಿಕ ಮೂರು ಬಗೆಯ ಸಂದೇಶಗಳಲ್ಲಿ  ಒಂದನ್ನು ಆಯ್ಕೆ ಮಾಡಬಹುದಾಗಿದೆ.  ಅದರ ಬಳಿಕ ಸಂದೇಶ ಕಳುಹಿಸುವವರ ಹೆಸರು ವಿಳಾಸ, ಸಂದೇಶ ಸ್ವೀಕರಿಸುವ ಗುರುಗಳ ಹೆಸರು ವಿಳಾಸ ಬರೆದು submit ಮಾಡಿದರೆ ನೀವು ಆಯ್ಕೆ ಮಾಡಿದ ಗಿಪ್ಟ್ ಮತ್ತು ಸಂದೇಶವನ್ನು ಶಿಕ್ಷಕರಿಗೆ ಅಂಚೆ ಇಲಾಖೆ ತಲುಪಿಸಲಿದೆ.

(ಗಲ್ಫ್ ಕನ್ನಡಿಗ)ಕೊರೊನಾ ಸಂದರ್ಭದಲ್ಲಿ ನಿಮ್ಮ ಮೆಚ್ಚಿನ ಶಿಕ್ಷಕರಿಗೆ ಉಡುಗೊರೆ ನೀಡಲು ಭಾರತೀಯ ಅಂಚೆ ಇಲಾಖೆಯ ಕರ್ನಾಟಕ ವೃತ್ತ ಈ ವಿನೂತನ ಪ್ರಯತ್ನ ಮಾಡಿದ್ದು ಇದನ್ನು ಸದುಪಯೋಗಪಡಿಸಬಹುದಾಗಿದೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99