ಈತ ಮಾಡಿದ ಹಲ್ಕಾ ಕೆಲಸ ನೋಡಿ; ಮಂಗಳೂರಿನಲ್ಲಿ ಲೇಡಿಸ್ ಪಿ ಜಿ ಗೆ ನುಗ್ಗಿ ಯುವತಿಯರ ಒಳವಸ್ತ್ರ....
Thursday, August 27, 2020
(ಗಲ್ಫ್ ಕನ್ನಡಿಗ)ಮಂಗಳೂರು; ಮಂಗಳೂರಿನಲ್ಲೊಬ್ಬ ವಿಕೃತ ಕಾಮಿ ಯುವತಿಯರ ಕೈಗೆ ಸಿಕ್ಕಿಬಿದ್ದು ಹಣ್ಣುಗಾಯಿ ನೀರುಗಾಯಿ ಆಗಿದ್ದಾನೆ.
(ಗಲ್ಫ್ ಕನ್ನಡಿಗ)ಮಂಗಳೂರಿನ ಹಂಪನಕಟ್ಟೆ ಲೇಡಿಸ್ ಪಿ ಜಿ ಯಲ್ಲಿ ಈತ ಪದೇ ಪದೇ ಯುವತಿಯರ ಒಳವಸ್ತ್ರ ಕದಿಯಲು ಬರುತ್ತಿದ್ದ. ಯುವತಿಯರು ಈತನ ವಿರುದ್ದ ಪೊಲೀಸ್ ಕಂಪ್ಲೆಂಟ್ ಕೊಟ್ಟರೆ ಈತನ ವಿರುದ್ದ ಸರಿಯಾದ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಯುವತಿಯರ ಆಕ್ರೋಶಕ್ಕೆ ಕಾರಣವಾಗಿತ್ತು.
ಈತ ನಾಲ್ಕನೇ ಬಾರಿ ಯುವತಿಯರ ಒಳವಸ್ತ್ರ ಕದಿಯಲು ಬರುತ್ತಿದ್ದಾಗ ಯುವತಿಯರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.ಮೊದಲೇ ಆಕ್ರೋಶಗೊಂಡಿದ್ದ ಯುವತಿಯರು ಚೆನ್ನಾಗಿ ತದುಕಿದ್ದಾರೆ. ಕ್ಲೈಮ್ಯಾಕ್ಸ್ ಗೆ ಬಂದ ಪೊಲೀಸರು ಯುವತಿಯರಿಂದ ವಿಕೃತ ಕಾಮಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
(ಗಲ್ಫ್ ಕನ್ನಡಿಗ)