-->

ಪಾರ್ಟಿ-ಇನ್-ಪರ್ಸನ್ ಇನ್ಮುಂದೆ ನೇರವಾಗಿ ಅರ್ಜಿ ಹಾಕುವಂತಿಲ್ಲ;ಹೈಕೋರ್ಟ್ ಮಹತ್ವದ ಆದೇಶ

ಪಾರ್ಟಿ-ಇನ್-ಪರ್ಸನ್ ಇನ್ಮುಂದೆ ನೇರವಾಗಿ ಅರ್ಜಿ ಹಾಕುವಂತಿಲ್ಲ;ಹೈಕೋರ್ಟ್ ಮಹತ್ವದ ಆದೇಶ

(ಗಲ್ಫ್ ಕನ್ನಡಿಗ)ನ್ಯಾಯಾಲಯದಲ್ಲಿ ವಕೀಲರ ನೆರವಿಲ್ಲದೇ ಕಕ್ಷೀದಾರನೇ ನೇರವಾಗಿ ಪ್ರಕರಣ ದಾಖಲಿಸಿ, ಬಳಿಕ ಪ್ರಕರಣದ ಸಂಬಂಧ ತಾವೇ ಖುದ್ದಾಗಿ ವಾದ ಮಂಡಿಸುತ್ತಿದ್ದ ಪಾರ್ಟಿ-ಇನ್-ಪರ್ಸನ್ ಇನ್ಮುಂದೆ ವಕೀಲರ ಮೂಲಕವೇ ಪ್ರಕರಣ ದಾಖಲಿಸಬೇಕೆಂಬ ಮಹತ್ವದ ಆದೇಶವನ್ನು ಹೈಕೋರ್ಟ್ ಹೊರಡಿಸಿದೆ.

(ಗಲ್ಫ್ ಕನ್ನಡಿಗ)ಬೆಂಗಳೂರು: ವಕೀಲರ ನೆರವಿಲ್ಲದೆ ನ್ಯಾಯಾಲಯದಲ್ಲಿ ಕಕ್ಷೀದಾರನೇ ನೇರವಾಗಿ ಪ್ರಕರಣ ದಾಖಲಿಸಿ, ಬಳಿಕ ಪ್ರಕರಣದ ಸಂಬಂಧ ತಾವೇ ಖುದ್ದಾಗಿ ವಾದ ಮಂಡಿಸುತ್ತಿದ್ದ ಪಾರ್ಟಿ-ಇನ್-ಪರ್ಸನ್ ಇನ್ಮುಂದೆ ವಕೀಲರ ಮೂಲಕವೇ ಪ್ರಕರಣ ದಾಖಲಿಸಬೇಕೆಂಬ ಮಹತ್ವದ ಆದೇಶವನ್ನು ಹೈಕೋರ್ಟ್ ಹೊರಡಿಸಿದೆ.

(ಗಲ್ಫ್ ಕನ್ನಡಿಗ)ಮೈಸೂರು ಉಚ್ಛ ನ್ಯಾಯಾಲಯ ಕಾಯ್ದೆ-1884ರ ಸೆಕ್ಷನ್ 19ರ ಅಡಿ ಅಧಿಕಾರ ಚಲಾಯಿಸಿ ರಾಜ್ಯ ಹೈಕೋರ್ಟ್ ಈ ನಿಯಮಗಳನ್ನು ರೂಪಿಸಿದ್ದು, ಇದಕ್ಕೆ ರಾಜ್ಯ ಸರ್ಕಾರವೂ ಒಪ್ಪಿಗೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಹೈಕೋರ್ಟ್ "ಕರ್ನಾಟಕ ಹೈಕೋರ್ಟ್ (ಸ್ವತಃ ಪಕ್ಷಗಾರನ ವಿಚಾರಣಾ ನಡವಳಿಕೆ) ನಿಯಮಗಳು" ಅನ್ನು ಜಾರಿ ಮಾಡಿ ಅಧಿಸೂಚನೆ ಹೊರಡಿಸಿದೆ.

(ಗಲ್ಫ್ ಕನ್ನಡಿಗ)ಪಾರ್ಟಿ ಇನ್ ಪರ್ಸನ್ (ಸ್ವತಃ ಪಕ್ಷಗಾರ) :
ಯಾವುದೇ ಒಂದು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ನ್ಯಾಯ ಕೋರಿ ನ್ಯಾಯಾಲಯಕ್ಕೆ ಖುದ್ದಾಗಿ ಅರ್ಜಿ ಸಲ್ಲಿಸಿ, ಬಳಿಕ ವಿಚಾರಣೆಗಳಲ್ಲಿ ಹಾಜರಾಗುವ ಮತ್ತು ಪ್ರಕರಣದಲ್ಲಿ ಪಕ್ಷಗಾರನಾಗಿದ್ದುಕೊಂಡೇ ವಾದಿಸುವ ವ್ಯಕ್ತಿಗೆ ಪಾರ್ಟಿ-ಇನ್- ಪರ್ಸನ್ ಅಥವಾ ಸ್ವತಃ ಪಕ್ಷಗಾರ ಎನ್ನುತ್ತಾರೆ. ಇಂತಹ ಪಕ್ಷಗಾರರು ತಮ್ಮ ಪ್ರಕರಣದಲ್ಲಿ ಮಾತ್ರ ವಕೀಲರ ಮಾದರಿಯಲ್ಲೇ ನ್ಯಾಯಾಲಯಗಳ ಪ್ರಕ್ರಿಯೆಯಲ್ಲಿ ಭಾಗಿಯಾಗುತ್ತಿದ್ದರು. ಹೈಕೋರ್ಟ್ ಜಾರಿ ಮಾಡಿರುವ ಹೊಸ ನಿಯಮಗಳ ಪ್ರಕಾರ ಇವರೀಗ ಹಲವು ನಿಬಂಧನೆಗಳನ್ನು ಪೂರೈಸಬೇಕಿದೆ.

(ಗಲ್ಫ್ ಕನ್ನಡಿಗ)ಪ್ರಕ್ರಿಯೆಗಳೇನು :ಪಾರ್ಟಿ-ಇನ್-ಪರ್ಸನ್ ಆಗಿ ಪ್ರಕರಣ ದಾಖಲಿಸುವ ಮುನ್ನ ನೋಟರಿ ಅಥವಾ ಓತ್ ಕಮಿಷನರ್​​ಗಳಿಂದ ತಮ್ಮ ಅರ್ಜಿಯನ್ನು ದೃಢೀಕರಿಸಬೇಕು. ಈ ವೇಳೆ ತಾವೇಕೆ ಪಾರ್ಟಿ-ಇನ್-ಪರ್ಸನ್ ಆಗಿ ಪ್ರಕರಣದಲ್ಲಿ ಭಾಗಿಯಾಗುತ್ತಿದ್ದೇವೆ, ವಕೀಲರನ್ನು ಯಾವ ಕಾರಣಕ್ಕಾಗಿ ನಿಯೋಜಿಸಿಕೊಳ್ಳುತ್ತಿಲ್ಲ ಎಂಬ ಬಗ್ಗೆ ಸೂಕ್ತ ಕಾರಣಗಳನ್ನು ವಿವರಿಸಬೇಕು. ಜತೆಗೆ ಇತ್ತೀಚಿನ ಭಾವಚಿತ್ರ ಹೊಂದಿರುವ, ಸಂಪೂರ್ಣ ವಿಳಾಸವುಳ್ಳ ಅಧಿಕೃತ ಗುರುತಿನ ಚೀಟಿ, ಮೊಬೈಲ್ ಸಂಖ್ಯೆ, ಇ-ಮೇಲ್ ವಿಳಾಸಗಳನ್ನು ಲಗತ್ತಿಸಬೇಕು. ದಾಖಲಿಸುತ್ತಿರುವ ಪ್ರಕರಣದ ವಿವರ ಹಾಗೂ ಪ್ರಸ್ತುತಪಡಿಸುತ್ತಿರುವ ಸಂಗತಿಗಳನ್ನು ವಕೀಲರಿಂದ ಪರಿಶೀಲಿಸಿ ಸಹಿ ಪಡೆದುಕೊಳ್ಳಬೇಕು. ನಂತರ ದೃಢೀಕರಣಗೊಳಿಸಿದ ಅರ್ಜಿಯನ್ನು ಪೂರ್ವಾನುಮತಿ ಪಡೆಯಲು ಅಗತ್ಯವಿರುವ ಅರ್ಜಿಗಳೊಂದಿಗೆ ಸಲ್ಲಿಸಬೇಕು. ಈ ಅರ್ಜಿಯನ್ನು ಪರಿಶೀಲನಾ ಶಾಖೆ (ಸ್ಕ್ರೂಟಿನಿ ಬ್ರಾಂಚ್) ಪರಿಶೀಲಿಸಿ ಪಾರ್ಟಿ-ಇನ್ ಪರ್ಸನ್ ಕಮಿಟಿಗೆ ಸಲ್ಲಿಸಬೇಕು.

(ಗಲ್ಫ್ ಕನ್ನಡಿಗ)ಪಾರ್ಟಿ-ಇನ್-ಪರ್ಸನ್ ಕಮಿಟಿ : 
ಪಾರ್ಟಿ-ಇನ್-ಪರ್ಸನ್ ಸಮಿತಿಯನ್ನು ಮುಖ್ಯ ನ್ಯಾಯಮೂರ್ತಿಗಳು ರಚಿಸಿರುತ್ತಾರೆ. ಈ ಸಮಿತಿಯು ಪಾರ್ಟಿ-ಇನ್-ಪರ್ಸನ್ ವ್ಯಕ್ತಿ ಹಾಗೂ ಅವರ ದಾಖಲೆಗಳನ್ನು ಪರಿಶೀಲಿಸಿ ಸೂಕ್ತವೆನ್ನಿಸಿದರೆ ಮಾತ್ರ ಅನುಮತಿ ನೀಡಬೇಕು. ಇದೇ ವೇಳೆ ಕಾನೂನು ಸೇವಾ ಸಮಿತಿಯಿಂದ ವಕೀಲರ ನೆರವು ಪಡೆದುಕೊಳ್ಳುವ ಕುರಿತು ಮಾಹಿತಿ ನೀಡಬೇಕು. ಮುಖ್ಯವಾಗಿ ಪಾರ್ಟಿ-ಇನ್-ಪರ್ಸನ್ ನ್ಯಾಯಾಲಯದಲ್ಲಿ ಹೇಗೆ ನಡೆದುಕೊಳ್ಳಬೇಕು ಮತ್ತು ಭಾಷೆ ಯಾವ ರೀತಿ ಇರಬೇಕು ಎಂಬ ಶಿಷ್ಟಾಚಾರಗಳನ್ನು ಹೇಳಿಕೊಡಬೇಕು ಮತ್ತು ಅವುಗಳನ್ನು ಪಾಲಿಸುವಂತೆ ಸೂಚಿಸಬೇಕು.
ಅಲ್ಲದೇ 1959ರ ಕರ್ನಾಟಕ ಹೈಕೋರ್ಟ್ ಕಾಯ್ದೆ ಮತ್ತು ನಿಯಮಗಳು ಹಾಗೂ 1977ರ ರಿಟ್ ಪ್ರೊಸೀಡಿಂಗ್ಸ್ ರೂಲ್ಸ್ ನಿಯಮಗಳಲ್ಲಿರುವಂತೆ ನ್ಯಾಯಾಲಯದ ಮುಂದೆ ಆಕ್ಷೇಪಣಾರ್ಹ ದಾಖಲೆಗಳನ್ನು ಸಲ್ಲಿಸುವುದು, ಆರೋಪಗಳನ್ನು ಮಾಡುವುದು ಅಥವಾ ಅಸಂವಿಧಾನಿಕ ಪದಗಳನ್ನು ಬಳಸವುದು ನಿಷಿದ್ಧ ಎಂಬುದನ್ನು ಮನವರಿಕೆ ಮಾಡಿಕೊಡಬೇಕು.

(ಗಲ್ಫ್ ಕನ್ನಡಿಗ)ಅರ್ಹತೆ ಇಲ್ಲದಿದ್ದರೆ ಮನವಿ ವಜಾ: ಒಂದು ವೇಳೆ ಇವರು ಪಾರ್ಟಿ-ಇನ್-ಪರ್ಸನ್ ಆಗಲು ಇಚ್ಚಿಸುವ ವ್ಯಕ್ತಿ ನ್ಯಾಯಾಲಯದ ಪ್ರಕ್ರಿಯೆಗಳಲ್ಲಿ ಭಾಗಿಯಾಗುವಷ್ಟು ಸಮರ್ಥರಿಲ್ಲ ಎಂದಾದರೆ ಅನುಮತಿ ನೀಡಬಾರದು ಮತ್ತು ಕಾನೂನು ಸೇವಾ ಪ್ರಾಧಿಕಾರದ ನೆರವು ಪಡೆದುಕೊಳ್ಳಲು ಸೂಚಿಸಬೇಕು. ಹಾಗೆಯೇ ಇವರಿಗೆ ವಕೀಲರ ನೆರವು ಪಡೆದುಕೊಳ್ಳುವ ಅರ್ಹತೆ ಇಲ್ಲ ಎಂದಾದರೆ ವಕೀಲರನ್ನು ನೇಮಿಸಿಕೊಳ್ಳಲು ಸೂಚಿಸಬೇಕು. (ಉಚಿತ ಕಾನೂನು ಸೇವೆ ಪಡೆದುಕೊಳ್ಳುವ ನಿಯಮಗಳ ಪ್ರಕಾರ ಕೋರ್ಟ್ ಶುಲ್ಕ ಕಟ್ಟಲಿಕ್ಕಾಗದ ಹಾಗೂ ವಕೀರನ್ನು ನಿಯೋಜಿಸಿಕೊಳ್ಳಲಿಕ್ಕೆ ಆಗದ ಬಡ ಮತ್ತು ದುರ್ಬಲ ವರ್ಗಕ್ಕೆ ಮಾತ್ರ ನ್ಯಾಯಾಲಯ ಉಚಿತವಾಗಿ ನ್ಯಾಯವಾದಿಗಳನ್ನು ನೀಡುತ್ತದೆ.)

(ಗಲ್ಫ್ ಕನ್ನಡಿಗ)ನ್ಯಾಯಾಲಯದ ವಿವೇಚನಾಧಿಕಾರ ಅಂತಿಮ: ಹೊಸ ನಿಯಮಗಳ ಪ್ರಕಾರ ಪಾರ್ಟಿ-ಇನ್-ಪರ್ಸನ್ ಗಳಿಗೆ ಅವಕಾಶ ನೀಡುವುದನ್ನು ಸಂಪೂರ್ಣ ನ್ಯಾಯಾಲಯದ ವಿವೇಚನಾಧಿಕಾರಕ್ಕೆ ಬಿಡಲಾಗಿದೆ. ಸಮಿತಿ ಒಪ್ಪಿ ಅನುಮತಿ ನೀಡಿದ ನಂತರವೂ ನ್ಯಾಯಾಲಯ ಅದನ್ನು ರದ್ದುಗೊಳಿಸಬಹುದಾಗಿದೆ. ಅಂತೆಯೇ ನ್ಯಾಯಾಲಯ ಒಂದು ವೇಳೆ ಕಕ್ಷೀದಾರರಿಗೆ ಪ್ರಕರಣದಲ್ಲಿ ಸಹಾಯ ಮಾಡಲು ವಕೀಲರನ್ನು ಕಾನೂನು ಸೇವಾ ಸಮಿತಿಯಿಂದ ಅಥವಾ ಅಮಿಕಸ್ ಕ್ಯೂರಿಯಂತೆ ನೇಮಿಸಿಕೊಟ್ಟಲ್ಲಿ ಕಕ್ಷೀದಾರರು ಒಪ್ಪಿಕೊಳ್ಳಬೇಕು.


(ಗಲ್ಫ್ ಕನ್ನಡಿಗ) ಅಂಸವಿಧಾನಿಕವಾಗಿ ವರ್ತಿಸಿದರೆ ನಿಷೇಧ :
ಪಾರ್ಟಿ-ಇನ್-ಪರ್ಸನ್ ಸಮಿತಿ ನೀಡುವ ಸೂಚನೆಗಳಂತೆ ಪಾರ್ಟಿ-ಇನ್-ಪರ್ಸನ್ ವ್ಯಕ್ತಿ ನ್ಯಾಯಾಲಯದ ಪ್ರಕ್ರಿಯೆಗಳಲ್ಲಿ ಭಾಗಿಯಾಗಬೇಕು. ಕೋರ್ಟ್ ಆವರಣದಲ್ಲಿ ಯಾವುದೇ ರೀತಿಯ ಆಕ್ಷೇಪಾರ್ಹ ರೀತಿಯಲ್ಲಿ ವರ್ತಿಸಬಾರದು, ಅಸಂವಿಧಾನಿಕ ಪದಗಳನ್ನು ಬಳಕೆ ಮಾಡಬಾರದು. ಒಂದು ವೇಳೆ ಮಾಡಿದಲ್ಲಿ ಅಂತವರ ವಿರುದ್ಧ ನ್ಯಾಯಾಂಗ ನಿಂದನೆ ಅಡಿ ಕ್ರಮ ಜರುಗಿಸಬಹುದು, ದಂಡ ವಿಧಿಸಬಹುದು ಹಾಗೂ ಅರ್ಜಿ ವಜಾಗೊಳಿಸಬಹುದು. ಇಂತಹ ದಂಡನೆಗೆ ಒಳಗಾದಲ್ಲಿ ಇವರಿಗೆ ಮತ್ತೆಂದೂ ಪಾರ್ಟಿ-ಇನ್-ಪರ್ಸನ್ ಆಗಲು ಅವಕಾಶವಿಲ್ಲ.

(ಗಲ್ಫ್ ಕನ್ನಡಿಗ)ಪೂರ್ವಾನ್ವಯವಾಗಲಿರುವ ನಿಯಮಗಳು : ಹೊಸ ನಿಯಮಗಳು ಇನ್ನು ಮುಂದೆ ಪಾರ್ಟಿ-ಇನ್-ಪರ್ಸನ್ ಗಳು ಅರ್ಜಿಗಳಿಗಷ್ಟೇ ಅನ್ವಯವಲ್ಲ. ಬದಲಿಗೆ ಈಗಾಗಲೇ ಸಲ್ಲಿಸಿರುವ ಅರ್ಜಿಗಳಿಗೆ ಮತ್ತು ವಿಚಾರಣೆ ಹಂತದಲ್ಲಿರುವ ಪ್ರಕರಣಗಳಿಗೂ ಅನ್ವಯವಾಗಲಿವೆ. ಆದರೆ, ಈ ನಿಯಮಗಳು ಜಾಮೀನು, ಪೆರೋಲ್ ಮತ್ತು ಹೇಬಿಯಸ್ ಕಾರ್ಪಸ್ ಅರ್ಜಿಗಳಿಗೆ ಅನ್ವಯಿಸುವುದಿಲ್ಲ. ಪಾರ್ಟಿ-ಇನ್-ಪರ್ಸನ್​ಗಳು ಅರ್ಜಿ ಸಲ್ಲಿಸಲು, ನಿಬಂಧನೆಗಳಿಗೆ ಒಪ್ಪಿರುವುದನ್ನು ಉಲ್ಲೇಖಿಸಲು ಹಾಗೂ ಸಮಿತಿಯಿಂದ ಅನುಮತಿ ಪಡೆದುಕೊಳ್ಳಲು ಮೂರು ಬಗೆಯ ಫಾರ್ಮ್-ಎ, ಫಾರ್ಮ್-ಬಿ, ಫಾರ್ಮ್-ಸಿ ಅರ್ಜಿಗಳನ್ನು ಸಲ್ಲಿಸಬೇಕಾಗಿದೆ.

ಆದೇಶಕ್ಕೆ ಕಾರಣ : ಇತ್ತೀಚೆಗೆ ನ್ಯಾಯಾಲಯಗಳಲ್ಲಿ ಪಾರ್ಟಿ-ಇನ್-ಪರ್ಸನ್ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೈಕೋರ್ಟ್ ಮಹತ್ವದ ನಿರ್ಧಾರ ಕೈಗೊಂಡಿದೆ. ಕೋರ್ಟ್ ಪ್ರಕ್ರಿಯೆಗಳು ಮತ್ತು ಶಿಷ್ಟಾಚಾರಗಳ ಅರಿವಿಲ್ಲದಿದ್ದರೂ ಇಂಗ್ಲಿಷ್ ಭಾಷೆ ತಿಳಿದಿರುವ ಏಕೈಕ ಆಧಾರದಲ್ಲಿ ಅರ್ಜಿಗಳನ್ನು ಸಲ್ಲಿಸುವ ಪ್ರವೃತ್ತಿ ಹೆಚ್ಚಾಗಿದೆ. ಇದರಿಂದಾಗಿ ಕೋರ್ಟ್ ಕಲಾಪಗಳ ಸುಗಮ ಕಾರ್ಯಾಚರಣೆಗೆ ಸಮಸ್ಯೆಯಾಗುತ್ತಿದೆ. ಜತೆಗೆ ಪಾರ್ಟಿ-ಇನ್-ಪರ್ಸನ್​ಗಳು ನ್ಯಾಯಮೂರ್ತಿಗಳಿಗೆ ಕಿರಿಕಿರಿಯಾಗುವಂತೆ ಮಾತನಾಡುವ ಚಾಳಿಯೂ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಪಾರ್ಟಿ-ಇನ್-ಪರ್ಸನ್​ಗಳು ನ್ಯಾಯಾಲಯದ ಮುಂದೆ ಹಾಜರಾಗುವ ಮುನ್ನ ಅವರನ್ನು ಪರೀಕ್ಷಿಸಲು ಹಾಗೂ ಶಿಷ್ಟಾಚಾರಗಳನ್ನು ತಿಳಿಸಿಕೊಡಲು ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ.

(ಗಲ್ಫ್ ಕನ್ನಡಿಗ)

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99