ಇದು ಉಲ್ಟಾ ಕೇಸ್; ಮದುವೆಯಾಗುವುದಾಗಿ ನಂಬಿಸಿ ಯುವಕನಿಗೆ ಮೋಸ ಮಾಡಿದ ಸುಂದರ ಯುವತಿ
(ಗಲ್ಫ್ ಕನ್ನಡಿಗ)ಹಾಸನ: ಮದುವೆಯಾಗುವುದಾಗಿ ನಂಬಿಸಿ ಯುವತಿಯರಿಗೆ ಯುವಕರು ಮೋಸ ಮಾಡುವುದನ್ನು ಕೇಳಿದ್ದೀರಿ. ಹಾಸನದಲ್ಲಿ ಇದಕ್ಕೆ ತದ್ವಿರುದ್ಧವಾದ ಘಟನೆ ನಡೆದಿದೆ. ಇಲ್ಲಿ ಮದುವೆಯಾಗುವುದಾಗಿ ನಂಬಿಸಿ ಯುವಕನಿಗೆ ಮೋಸ ಮಾಡಿದ್ದು ಸುಂದರ ಯುವತಿ.

(ಗಲ್ಫ್ ಕನ್ನಡಿಗ)ಲಕ್ಷ್ಮೀ ಎಂಬಾಕೆ ಈ ಮೋಸದ ಜಾಲ ಎಳೆದವಳು. ಇವಳ ಮೋಸದ ಜಾಲಕ್ಕೆ ಸಿಲುಕಿದ್ದು ಹಾಸನ ಜಿಲ್ಲೆಯ ಪರಮೇಶ್.

(ಗಲ್ಫ್ ಕನ್ನಡಿಗ)ಚಿಕ್ಕಬಳ್ಳಾಪುರ ಮೂಲದ ಲಕ್ಷ್ಮಿ  (32) ಮ್ಯಾಟ್ರಿಮೋನಿ ಮೂಲಕ ಪರಮೇಶ್ ನನ್ನು ಪರಿಚಯ ಮಾಡಿಕೊಂಡಿದ್ದಾಳೆ. ಈಕೆಗೆ ಕೋಲಾರ ಮೂಲದ ಶಿವಣ್ಣ ಎಂಬಾತ ಮೋಸದಾಟಕ್ಕೆ ಸಹಾಯ ಮಾಡಿದ್ದಾನೆ.

(ಗಲ್ಫ್ ಕನ್ನಡಿಗ)ಮ್ಯಾಟ್ರಿಮೋನಿ ಮೂಲಕ ಪರಮೇಶನನ್ನು ಪರಿಚಯ ಮಾಡಿಕೊಂಡ ಲಕ್ಷ್ಮೀ ನಾನು ಅನಾಥೆ. ಐಟಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದೇನೆ. ಚಿಕ್ಕಮ್ಮ ನ ಮನೆಯಲ್ಲಿ ವಾಸ ಮಾಡುತ್ತಿದ್ದೇನೆ ಎಂಬ ರೀಲ್ ಬಿಟ್ಟಿದ್ದಾಳೆ. 2019 ಡಿಸೆಂಬರ್ ನಿಂದ  ಈಕೆ ಪರಮೇಶ್ ನಿಂದ ಆರು ಲಕ್ಷ ಹಣವನ್ನು ಪೀಕಿಸಿದ್ದಾಳೆ.


(ಗಲ್ಫ್ ಕನ್ನಡಿಗ)ಹಣ ಬಂದ ಬಳಿಕ ಲಕ್ಷ್ಮೀ ವರಸೆಯೆ ಬೇರೆಯಾಗಿದೆ. ಇನ್ನೂ ನನಗೆ ಪೋನ್ ಮಾಡಿದರೆ ಅತ್ಯಾಚಾರ ಕೇಸ್ ದಾಖಲಿಸುತ್ತೇನೆ ಎಂದು ಬೆದರಿಸಿದ್ದಾಳೆ.ಈಕೆಯ ಬೆದರಿಕೆ ಬಳಿಕ ಪರಮೇಶ್ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದು  ಪೊಲೀಸರು ಲಕ್ಷ್ಮೀ ಮತ್ತು ಶಿವಣ್ಣನನ್ನು ಬಂಧಿಸಿದ್ದಾರೆ.
 
  (ಗಲ್ಫ್ ಕನ್ನಡಿಗ)