
ಸಂಸದ ಅನಂತ್ ಹೆಗ್ಡೆ ಇದ್ದ ವಿಮಾನಕ್ಕೆ ಸಿಗ್ನಲ್ ಸಮಸ್ಯೆ; ಗಂಟೆಗಳ ಕಾಲ ಆಗಸದಲ್ಲಿ ಸುತ್ತು
(ಗಲ್ಫ್ ಕನ್ನಡಿಗ)ಹುಬ್ಬಳ್ಳಿ ; ಸಂಸದ ಅನಂತಕುಮಾರ್ ಹೆಗ್ಡೆ ಪ್ರಯಾಣಿಸುತ್ತಿದ್ದ ವಿಮಾನಕ್ಕೆ ವಿಮಾನನಿಲ್ದಾಣದಲ್ಲಿ ಇಳಿಯಲು ಸಿಗ್ನಲ್ ಸಿಗದ ಕಾರಣದಿಂದ ವಿಮಾನ ಒಂದು ಗಂಟೆಗಳ ಕಾಲ ಆಗಸದಲ್ಲಿ ಸುತ್ತು ಹೊಡೆದಿದೆ.
(ಗಲ್ಫ್ ಕನ್ನಡಿಗ)ಈ ಘಟನೆ ಇಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಬೆಂಗಳೂರಿನಿಂದ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬೆಳಿಗ್ಗೆ ಹೊರಟ ವಿಮಾನ ಬೆಳಿಗ್ಗೆ 8.55 ಕ್ಕೆ ಲ್ಯಾಂಡಿಂಗ್ ಆಗಬೇಕಿತ್ತು. ಆದರೆ ವಿಮಾನ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿಯಲು ಟವರ್ ಸಿಗ್ನಲ್ ಸಿಕ್ಕಿರಲಿಲ್ಲ.
(ಗಲ್ಫ್ ಕನ್ನಡಿಗ)ಇದರಿಂದಾಗಿ ವಿಮಾನ ಒಂದು ಗಂಟೆಗಳ ಕಾಲ ಆಗಸದಲ್ಲಿ ಸುತ್ತು ಹೊಡೆಯಿತು. ಹುಬ್ಬಳ್ಳಿಯಲ್ಲಿ ಲ್ಯಾಂಡಿಂಗ್ ಅವಕಾಶವಾಗದಿದ್ದರೆ ಮಂಗಳೂರು ಅಥವಾ ಗೋವಾದಲ್ಲಿ ಲ್ಯಾಂಡಿಂಗ್ ಮಾಡಲು ಆಲೋಚಿಸಲಾಗಿತ್ತು. ಆದರೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿಯಲು 10.25 ಕ್ಕೆ ಅವಕಾಶ ಸಿಕ್ಕಿದ್ದರಿಂದ ವಿಮಾನ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡಿಂಗ್ ಆಯಿತು. ಈ ವಿಮಾನದಲ್ಲಿ ಅನಂತಕುಮಾರ್ ಹೆಗ್ಡೆ ಸೇರಿ 49 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು.