ತುಂಬೆ ಬಿ. ಅಹ್ಮದ್ ಹಾಜಿ ಮುಹಿಯುದ್ದೀನ್ ನಿಧನ


(ಗಲ್ಫ್ ಕನ್ನಡಿಗ)ಮಂಗಳೂರು; ತುಂಬೆ ಬಿ ಎ ಗ್ರೂಪ್ ಸಂಸ್ಥಾಪಕ ಬಿ ಅಹ್ಮದ್ ಹಾಜಿ ಮುಹಿಯ್ಯುದ್ದೀನ್ (87) ಅವರು ಇಂದು ಅಲ್ಪಕಾಲದ ಅಸೌಖ್ಯದಿಂದ ಕೊನೆಯುಸಿರೆಳೆದಿದ್ದಾರೆ.

(ಗಲ್ಫ್ ಕನ್ನಡಿಗ)ಉದ್ಯಮಿಯಾಗಿ, ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಸಾಮಾಜಿಕ ಸೇವೆ ನಡೆಸುತ್ತಿದ್ದ ಬಿ ಅಹಮದ್ ಹಾಜಿ‌ ಮುಹಿಯ್ಯುದ್ದೀನ್ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.

(ಗಲ್ಫ್ ಕನ್ನಡಿಗ)1933 ಜೂನ್ 18 ರಂದು ಜನಿಸಿದ ಅಹ್ಮದ್ ಹಾಜಿ ಅವರು ಟಿಂಬರ್ ಉದ್ಯಮದಲ್ಲಿ ಖ್ಯಾತಿ ಪಡೆದು ತಮ್ಮ ಹುಟ್ಟೂರಲ್ಲೆ ಪ್ರೌಢಶಾಲೆ , ಪಿ ಯು ಕಾಲೇಜು ಆರಂಭಿಸಿದರು.ಇದೀಗ ತುಂಬೆ ಬಿ ಎ ಗ್ರೂಪ್ ದೇಶ ವಿದೇಶದಲ್ಲಿ ಚಿರಪರಿಚಿತ ಹೆಸರು.

(ಗಲ್ಫ್ ಕನ್ನಡಿಗ)ಅಹ್ಮದ್ ಹಾಜಿ ಅವರ ಪಾರ್ಥಿವ ಶರೀರವನ್ನು ಅಪರಾಹ್ನ 3 ಗಂಟೆಗೆ ತುಂಬೆಯಲ್ಲಿರುವ ತುಂಬೆ ಪಿಯು ಕಾಲೇಜಿನಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಇಡಲಾಗುವುದು. 4 ಗಂಟೆಯ ಬಳಿಕ ತುಂಬೆ ಮಸೀದಿಯಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ.