-->

ಮಂಗಳೂರು ವಿವಿಯಲ್ಲಿ ವರ್ಣ ಚಿತ್ರ ಸೃಜನ, ವಿಶೇಷ ಉಪನ್ಯಾಸ ಹಾಗೂ ಕೃತಿ ಬಿಡುಗಡೆ ಕಾರ್ಯಕ್ರಮ

ಮಂಗಳೂರು ವಿವಿಯಲ್ಲಿ ವರ್ಣ ಚಿತ್ರ ಸೃಜನ, ವಿಶೇಷ ಉಪನ್ಯಾಸ ಹಾಗೂ ಕೃತಿ ಬಿಡುಗಡೆ ಕಾರ್ಯಕ್ರಮ

 

(ಗಲ್ಪ್‌ ಕನ್ನಡಿಗ) ಮಂಗಳೂರು: ಮಂಗಳೂರು ವಿವಿಯ ಎನ್.ಜಿ. ಪಾವಂಜೆ ಲಲಿತ ಕಲಾ ಪೀಠ ಮಂಗಳಗಂಗೋತ್ರಿ ಇದರ ಆಶ್ರಯದಲ್ಲಿ ರಾಯನಮನೆ ಫೊಟೋಗ್ರಾಫಿಕ್ ಫೌಂಡೇಶನ್ ಪುತ್ತೂರು ಇವರ ಸಹಯೋಗದೊಂದಿಗೆ ವಿಶ್ವಛಾಯಾಗ್ರಾಹಕರ ದಿನಾಚರಣೆಯ ಅಂಗವವಾಗಿ ನಡೆದ ವರ್ಣ ಚಿತ್ರ ಸೃಜನ, ವಿಶೇಷ ಉಪನ್ಯಾಸ ಹಾಗೂ ಕೃತಿ ಬಿಡುಗಡೆ ಕಾರ್ಯಕ್ರಮ ಬುಧವಾರ ಮಂಗಳೂರು ವಿವಿಯಲ್ಲಿ ನಡೆಯಿತು.


(ಗಲ್ಪ್‌ ಕನ್ನಡಿಗ)ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ. ಪಿ.ಎಸ್. ಯಡಪಡಿತ್ತಾಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮೂಡಬಿದಿರೆಯ ವೈದ್ಯ ಹಾಗೂ ಛಾಯಾಗ್ರಾಹಕ ಡಾ.ಕೃಷ್ಣ ಮೋಹನ್ ವಿಶೇಷ ಉಪನ್ಯಾಸ ನೀಡಿದರು.


(ಗಲ್ಪ್‌ ಕನ್ನಡಿಗ)ಕಾರ್ಯಕ್ರಮದಲ್ಲಿ ಡಾ.ಎಚ್.ಸಿ.ಮುರಳೀಧರ ರಾಯರಮನೆ ಅವರು ಬರೆದ ಸೆಟ್ ಬಿಫೋರ್ ಶೂಟ್ ಕೃತಿಯನ್ನು ಕುಲಪತಿಗಳು ಬಿಡುಗಡೆಗೊಳಿಸಿದರು.

ಕಾರ್ಯಕ್ರಮದಲ್ಲಿ ಚಿತ್ರಕಲಾವಿದ ಗಣೇಶ್ ಸೋಮಯಾಜಿ ಅವರು ವರ್ಣ ಚಿತ್ರವನ್ನು ರಚಿಸಿ ಕುಲಪತಿಯವರಿಗೆ ಹಸ್ತಾಂತರಿಸಿದರು. ಇದೇ ಸಂದರ್ಭದಲ್ಲಿ ಚಿತ್ರಕಲಾವಿದ ಗಣೇಶ್ ಸೋಮಯಾಜಿ ಹಾಗೂ ಡಾ.ಕೃಷ್ಣಮೋಹನ ಅವರನ್ನು ಸನ್ಮಾನಿಸಲಾಯಿತು.

(ಗಲ್ಪ್‌ ಕನ್ನಡಿಗ)ಕಾರ್ಯಕ್ರಮದಲ್ಲಿ ಡಾ.ಮುರಳೀಧರ ರಾಯರಮನೆ ಅವರು ಕೃತಿಪರಿಚಯ ಮಾಡಿ ಮಾತನಾಡಿದರು. ಎನ್.ಜಿ.ಪಾವಂಜೆ ಪೀಠದ ಸಂಯೋಜಕರಾದ ಪ್ರೊ.ಶ್ರೀಪತಿ ಕಲ್ಲೂರಾಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸತೀಶ್ ಕೊಣಾಜೆ ವಂದಿಸಿದರು. ಕಾಜಲ್ ಕಾರ್ಯಕ್ರಮ ನಿರೂಪಿಸಿದರು.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99