ಸುಜಾತ ಗಜೇಂದ್ರ ಜೈನ್ ಸಾಗರ ಅವರ ಕವನ "ಉಳುಮೆ"
Thursday, August 20, 2020
ಸುಜಾತ ಗಜೇಂದ್ರ ಜೈನ್ ಸಾಗರ ✍️
ಜೋಡೆತ್ತಿನ ನೊಗಕ್ಕೆ ಊರೆತ್ತಿನ ಸಿಂಗಾರ.
ಎತ್ತಲಾರದ ತಲೆಗೆ ನೊಗವೇ ಹೆಗಲಿಗೆ ಭಾರ.
ಬಿಸಿಲು ಮಳೆ ಎನ್ನದೇ ಉಳುಮೆಯ
ದೇ ಸಾರ.
ಹಿಡಿದು ಬೆದರಿಸುವನು ಆಗಾಗ ಮೂಗುದಾರ.
ಕಾಲ್ಕಿತ್ತು ಎಳೆಯಲಾರ ಆದರೂ ಮಣ್ಣಲಿ ಆದ್ರ ಪ್ರೀತಿಯ ಮಾತು.
ಯಾವ ಪಾಠದಲ್ಲಿ ತ್ತು ತಿಳಿಯದು ಸಿರಿ ಸ್ವತ್ತು.
ನೋಡುಗರಿಗೆ ಕಂಬಳದಲ್ಲಿ ಸಂಭ್ರಮದ ಮನೆಮಾತು.
ಹಾಗಿತ್ತು....! ಹೀಗಿತ್ತು...! ಒಟ್ಟಾರೆ ಕಣ್ಣಿಗೆ ಗಮ್ಮತ್ತು.
ನೊಗಕೆ ಹೆಗಲು ಭಾರವೋ.., ಹೆಗಲಿಗೆ ಜೊತಗ ಭಾರವೋ.,
ಇದರೊಳಗೆನಡುಗಿದೆ....ಜೀವನ ಮಣಭಾರವೋ....
ಚಾಟಿ ಯೊಳಗಿನ ಕಾವೋ,ಮೀಟಿ ನಿಂತ ನೋವೋ....
ನೋಟದ ಆನಂದದಿ ಮನದ ನೋವ ಮರೆಸುವ ಸಾವೋ....
ಚರಿತ್ರೆಯಾಗಬಹುದು ನೊಗದೊಳಗಿನ ನಂಟು.
ಜೊತೆಯಾಗಿವೆ ಇಂದು ಯಂತ್ರಗಳ ಅಂಟು.
ಉಪ್ಪರಿಗೆ ಸೇರಿವೆ ಇಂದು ನೊಗಗಳ ಗಂಟು.
ಜೋಡೆತ್ತಿಗೂ ಬರ ವಾಗಿದೆ ಅದರೊಳಗು ಸಾರವುಂಟು.